ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾಗೌಡ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರತ್ಯೇಕ ಬ್ಯಾರಕ್ನಿಂದ ಸಾಮಾನ್ಯ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ.
ಹನೂರು ರೈತರ ಸಾವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿ: ಆರ್. ಅಶೋಕ್
ಇಲ್ಲಿಯವರೆಗೆ ಕಡಿಮೆ ಸಂಖ್ಯೆಯ ಕೈದಿಗಳಿದ್ದ ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದ್ದ ಪವಿತ್ರಾಗೌಡ ಅವರನ್ನು ಇದೀಗ ಸುಮಾರು 16 ಕೈದಿಗಳಿರುವ ಸಾಮಾನ್ಯ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೈಲಿನಲ್ಲಿನ ನಿಯಮಗಳು ಮತ್ತು ಶಿಸ್ತು ಪಾಲನೆಗೆ ಸಂಬಂಧಿಸಿದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ವಿಡಿಯೋ ಕಾನ್ಫರೆನ್ಸ್ಗೆ ತಡವಾಗಿ ಹಾಜರು
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಇತ್ತೀಚೆಗೆ ನಡೆದ ವಿಚಾರಣೆಗೆ ಇತರ ಆರೋಪಿಗಳು ನಿಗದಿತ ಸಮಯಕ್ಕೆ ಹಾಜರಾಗಿದ್ದರೆ, ಪವಿತ್ರಾಗೌಡ ತಡವಾಗಿ ಹಾಜರಾದರು ಎನ್ನಲಾಗಿದೆ. ಈ ಬೆಳವಣಿಗೆ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಸಮಯ ಪಾಲನೆ ಕುರಿತು ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಏನಿದು ಏರ್ಬಡ್ಸ್ ಬಳಕೆ ವಿವಾದ :
ಇದರ ಬೆನ್ನಲ್ಲೇ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯ ವೇಳೆ ಪವಿತ್ರಾಗೌಡ ಕಿವಿಯಲ್ಲಿ ಏರ್ಬಡ್ಸ್ ಧರಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗೆ ಎಲೆಕ್ಟ್ರಾನಿಕ್ ಸಾಧನ ಹೇಗೆ ಲಭ್ಯವಾಯಿತು ಎಂಬ ಪ್ರಶ್ನೆ ಎದುರಾಗಿದೆ. ಜೈಲು ಆವರಣದಲ್ಲಿ ಇಂತಹ ಸಾಧನ ಬಳಕೆಯ ಕುರಿತು ನ್ಯಾಯಾಲಯವೂ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಜೈಲು ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲಾಗಿದೆ ಎಂದು ವರದಿಯಾಗಿದೆ.
ಹನೂರು ರೈತರ ಸಾವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿ: ಆರ್. ಅಶೋಕ್
ವಿಶೇಷ ಸೌಲಭ್ಯಗಳಿಗೆ ಕಡಿವಾಣ?
ಈ ಬೆಳವಣಿಗೆಗಳ ಬಳಿಕ ಜೈಲು ಆಡಳಿತ ಪವಿತ್ರಾಗೌಡ ಅವರನ್ನು ಸಾಮಾನ್ಯ ಬ್ಯಾರಕ್ಗೆ ಸ್ಥಳಾಂತರಿಸಿದೆ ಎನ್ನಲಾಗಿದೆ. ಇದರೊಂದಿಗೆ ಅವರಿಗೆ ಈ ಹಿಂದೆ ಇದ್ದ ಪ್ರತ್ಯೇಕ ಬ್ಯಾರಕ್ನ ಸೌಲಭ್ಯಗಳು ಮುಂದುವರಿಯುವುದಿಲ್ಲ. ಘಟನೆ ಕುರಿತು ಜೈಲು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಸ್ಪಷ್ಟನೆ ಇದೀಗ ಕುತೂಹಲ ಮೂಡಿಸಿದೆ



