ಭಾನುವಾರ, 25 ಅಕ್ಟೋಬರ್ 2026
Trending

ಪಾರ್ಕ್ ಜಾಗಕ್ಕೆ ಕತ್ತರಿ? ಉದ್ಯಾನವನಗಳ ವಿಧೇಯಕ ತಡೆಗೆ ರಾಜ್ಯಪಾಲರಿಗೆ ತೇಜಸ್ವಿ ಸೂರ್ಯ ಮನವಿ

Tejasvi Surya

ಬೆಂಗಳೂರು: ಕರ್ನಾಟಕ ಉದ್ಯಾನವನಗಳ ವಿಧೇಯಕದ ವಿರುದ್ಧ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಧೇಯಕಕ್ಕೆ ಅನುಮೋದನೆ ನೀಡದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

Sponsored

ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿ ಮರುಪರಿಶೀಲನೆ ನಡೆಸುವಂತೆ ಕೋರಿದ್ದಾರೆ.

ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ: ಮಂತ್ರಾಲಯ ಶ್ರೀಗಳಿಂದ ಮಹತ್ವದ ಹೇಳಿಕೆ

ಉದ್ಯಾನವನಗಳ ಒಟ್ಟು ಭೂಮಿಯಲ್ಲಿ ಶೇ.5ರಷ್ಟು ಜಾಗವನ್ನು ಪರಭಾರೆ ಮಾಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬುದು ತೇಜಸ್ವಿ ಸೂರ್ಯ ಅವರ ಪ್ರಮುಖ ಆಕ್ಷೇಪವಾಗಿದೆ. ಈ ಅವಕಾಶ ಜಾರಿಯಾದರೆ ಸಾರ್ವಜನಿಕರಿಗಾಗಿ ಮೀಸಲಿರುವ ಪಾರ್ಕ್‌ಗಳ ಸ್ವರೂಪ ಬದಲಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಉದ್ಯಾನವನಗಳು ಸಾರ್ವಜನಿಕರಿಗೆ ಅಗತ್ಯವಿರುವ ಹಸಿರು ಪ್ರದೇಶಗಳಾಗಿವೆ. ಹೀಗಾಗಿ ಪಾರ್ಕ್‌ಗಳ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದು ಸೂಕ್ತವಲ್ಲ ಎಂದು ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

 

ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ: ಮಂತ್ರಾಲಯ ಶ್ರೀಗಳಿಂದ ಮಹತ್ವದ ಹೇಳಿಕೆ

ವಿಧೇಯಕವನ್ನು ಪರಿಶೀಲಿಸಿ, ಸಾರ್ವಜನಿಕ ಉದ್ಯಾನವನಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ರಾಜ್ಯದಲ್ಲಿ ಉದ್ಯಾನವನಗಳ ಭೂಮಿ ಬಳಕೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.