ಸೋಮವಾರ, 26 ಅಕ್ಟೋಬರ್ 2026
Trending

14.2 ಕೆಜಿ ಬದಲು ಕೇವಲ 10 ಕೆಜಿ ಗ್ಯಾಸ್‌: ವದಂತಿಗೆ ಕೇಂದ್ರ ಸರಕಾರ ಸ್ಪಷ್ಟನೆ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ಎಲ್‌ಪಿಜಿ ಕೊರತೆ ಎದುರಾಗಿರುವ ಕಾರಣ, ತೈಲ ಕಂಪನಿಗಳು ಮನೆಗಳಿಗೆ 14.2 ಕೆಜಿ ಸಿಲಿಂಡರ್‌ಗಳಲ್ಲಿ ಕೇವಲ 10 ಕೆಜಿ ಎಲ್‌ಪಿಜಿ ಪೂರೈಸುವ ಕುರಿತು ವರದಿಯಾಗಿತ್ತು. ಆದರೆ ಕೇಂದ್ರ ಸರಕಾರ ಇದನ್ನು ಅಲ್ಲಗೆಳೆದಿದ್ದು, ಯಾವುದೇ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ.

Sponsored

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ʼಇದೆಲ್ಲಾ ಕೇವಲ ಊಹಾಪೋಹ, ಇಂಥ ವದಂತಿಗಳಿಗೆ ಯಾವುದೇ ಹೇಳಿಕೆ ಅಥವಾ ವಿವರಣೆ ಕೊಡಲು ಸಾಧ್ಯವಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬೇಡಿʼ ಎಂದು ಮನವಿ ಮಾಡಿದ್ದಾರೆ.

Advertisement
Advertisement
Advertisement