ಭಾನುವಾರ, 25 ಅಕ್ಟೋಬರ್ 2026
Trending

ಇರಾನ್‌ ಜೊತೆಗೆ ತೈಲ ವ್ಯಾಪಾರ: ಭಾರತ ಮೂಲದ 4 ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ

ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್‌ ಉತ್ಪನ್ನಗಳನ್ನು ಆಮದು ಮಾಡಿದ್ದಕ್ಕೆ ಭಾರತ ಮೂಲದ ನಾಲ್ಕು ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ ಎಂದು ಅಮೆರಿಕದ ವಿದೇಶಾಂತ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Sponsored

ಭಾರತ ಮೂಲದ ನಾಲ್ಕು ಕಂಪನಿಗಳು ಹಾಗೂ ಮೂವರು ಭಾರತೀಯ ವ್ಯಕ್ತಿಗಳ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ.

ಭಾರತ ಮೂಲದ ಸದಾಶಿವ ಓವರ್‌ಸೀಸ್‌ ಲಿಮಿಟೆಡ್‌ ಸಂಸ್ಥೆಯು ಫೆ.2024 ರಿಂದ ಜೂನ್‌ 2025ರ ಅವಧಿಯಲ್ಲಿ ಸುಮಾರು 69 ದಶಲಕ್ಷ ಡಾಲರ್‌ ಮೌಲ್ಯದ ಇರಾನ್‌ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಪಿಪಿ ಸಾಫ್ಟ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಪ್ರಾಕೃತೀಸ್‌ ಇನ್ಫ್ರಾ ಇಂಪೆಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳು ತಲಾ ಸುಮಾರು 25 ದಶಲಕ್ಷ ಡಾಲರ್‌ ಮೌಲ್ಯದ ಇರಾನ್‌ ಮೂಲದ ಪೆಟ್ರೋಲಿಯಂ ಆಮದು ಮಾಡಿದೆ ಎಂದು ಅಮೆರಿಕ ಹೇಳಿದೆ.

ಇನ್ನು ಉಳಿದ ಹಾಗೆ ಪೋರ್ಟೀಸ್‌ ಪಾರ್ಟ್‌ನರ್ಸ್‌ ಎಲ್‌ಎಲ್‌ಪಿ ಎಂಬ ಭಾರತ ಮೂಲದ ಕಸ್ಟಮ್ಸ್‌ ಬ್ರೋಕರ್‌ ಸಂಸ್ಥೆಯ ಮೇಲೂ ಅಮೆರಿಕ ನಿರ್ಬಂಧಿಸಿದೆ.

ಕಂಪನಿಗಳ ಜೊತೆಗೆ ಮೂವರು ಭಾರತೀಯರ ಮೇಲೂ ಅಮೆರಿಕ ಕ್ರಮ ಕೈಗೊಂಡಿದೆ. PP Softtech ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಗರ್ಗ್ ಅವರನ್ನು ನಿರ್ಬಂಧಿಸಲಾಗಿದ್ದು, Portease Partnersಗೆ ಸಂಬಂಧಿಸಿದ ಇಂದ್ರಿಸ್ಮಿಯಾ ಅಶರಫ್ಮಿಯಾ ಶೇಖ್ ಮತ್ತು ಹರೀಶ್ ರಾಮಚಂದ್ರ ರಂಗಿ ಅವರ ಮೇಲೂ ನಿರ್ಬಂಧ ಹೇರಲಾಗಿದೆ.