ಸೋಮವಾರ, 26 ಅಕ್ಟೋಬರ್ 2026
Trending

ದಕ್ಷಿಣ ಕನ್ನಡ ಜಿಲ್ಲೆಯ 1.5 ಲಕ್ಷ ಮತದಾರರಿಗೆ ನೋಟೀಸ್- ಇವನ್ನು ಪಾಲಿಸದಿದ್ರೆ ಲಿಸ್ಟ್ ನಿಂದ ಹೆಸರು ಔಟ್!!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಹಿನ್ನಲೆ ವಿವಿಧ ಪರಿಶೀಲನೆ ಕೋರಿ 1,50,153 ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

Sponsored

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 16,46,387 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ವಿವಿಧ ಪರಿಶೀಲನೆ ಕೋರಿ 1,50,153 ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ. ನೋಟಿಸ್‌ ಸ್ವೀಕರಿಸುವ ಮತದಾರರು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಆರ್‌ಒ/ಎಇಆರ್‌ಒ ಎದುರು ಭೌತಿಕವಾಗಿ ಹಾಜರಾಗಲೇಬೇಕು, ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಅವರ ಹೆಸರು ಅಳಿಯಬಹುದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟಿಸ್‌ಗಳನ್ನು ಇನ್ನೆರಡು ದಿನಗಳಲ್ಲಿ ಬಿ.ಎಲ್.ಒ.ಗಳ ಮೂಲಕ ಮತದಾರರ ನಿವಾಸಕ್ಕೆ ತಲುಪಿಸಲಾಗುವುದು. ಎಸ್‌ಐಆರ್‌ನ ಮೊದಲ ಹಂತದಲ್ಲಿ ಸರಿಯಾಗಿ ಮ್ಯಾಪ್ ಮಾಡಲಾಗದವರು ಅಥವಾ ನೀಡಿದ ವಿವರಗಳು ತಾರ್ಕಿಕ ವ್ಯತ್ಯಾಸಗಳನ್ನು ತೋರಿಸಿದರೆ ನೋಟಿಸ್‌ಗಳನ್ನು ನೀಡಲಾಗುತ್ತದೆ ಎಂದರು.

ನೋಟಿಸ್‌ ಪಡೆದು ಅಗತ್ಯ ದಾಖಲೆಗಳೊಂದಿಗೆ ಖುದ್ದು ಹಾಜರಾಗುವುದು ಕಡ್ಡಾಯ. ಪ್ರಥಮ ಬಾರಿಗೆ ನಿಗದಿತ ದಿನಾಂಕದಂದು ಹಾಜರಾಗಲು ಸಾಧ್ಯವಾಗದೆ ಇದ್ದರೆ ಒಮ್ಮೆ ಮಾತ್ರ ವಿಸ್ತರಣೆಗೆ ಅವಕಾಶ ನೀಡಲಾಗುವುದು. 2ನೇ ಬಾರಿಯೂ ಹಾಜರಾಗಲು ವಿಫಲವಾದರೆ ಮತದಾರರ ಪಟ್ಟಿಯಿಂದ ಅವರ ಹೆಸರು ಅಳಿಸಿಹೋಗುವ ಸಾಧ್ಯತೆ ಇದೆ. ನಿಯಮಾನುಸಾರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.