ಸೋಮವಾರ, 26 ಅಕ್ಟೋಬರ್ 2026
Trending

Noisefit Crew : ಕೇವಲ ರೂ.1499ಕ್ಕೆ ದೊರೆಯುತ್ತೆ ಈ ಬ್ರಾಂಡೆಡ್‌ ವಾಚ್‌, ನಿಮ್ಮ ಮನಸ್ಸು ಹಕ್ಕಿಯಂತೆ ಹಾರುವುದು ಖಂಡಿತ

ಸ್ಮಾರ್ಟ್ ವಾಚ್ (Smart watch) ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಸ್ಮಾರ್ಟ್ ವಾಚ್‌ಗಳು ಬಳಕೆದಾರರಿಗೆ ಟೈಮ್ ನ ವರದಿ ನೀಡುವುದು ಮಾತ್ರವಲ್ಲದೆ ಅವರ ಆರೋಗ್ಯದ ಮೇಲೆ ಕಾಳಜಿಯೂ ವಹಿಸುತ್ತದೆ. ಸದ್ಯ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿಗಳು ಗ್ರಾಹಕರ ಗಮನಸೆಳೆಯಲು ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸುತ್ತಿದೆ.

Noisefit Crew : ಸ್ಮಾರ್ಟ್ ವಾಚ್ (Smart watch) ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಸ್ಮಾರ್ಟ್ ವಾಚ್‌ಗಳು ಬಳಕೆದಾರರಿಗೆ ಟೈಮ್ ನ ವರದಿ ನೀಡುವುದು ಮಾತ್ರವಲ್ಲದೆ ಅವರ ಆರೋಗ್ಯದ ಮೇಲೆ ಕಾಳಜಿಯೂ ವಹಿಸುತ್ತದೆ.
ಸದ್ಯ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿಗಳು ಗ್ರಾಹಕರ ಗಮನಸೆಳೆಯಲು ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸುತ್ತಿದೆ. ಇದೀಗ ಅಂತಹದೇ ವಿಭಿನ್ನ ವಿನ್ಯಾಸದ ವಾಚ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನಾಯ್ಸ್ ಕಂಪನಿ (Noise company) ನಾಯ್ಸ್​ಫಿಟ್ ಕ್ರೂ (Noisefit Crew) ಎಂಬ ನೂತನ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ.

Sponsored

ಇದರ ವೈಶಿಷ್ಟ್ಯದ ಬಗ್ಗೆ ಹೇಳಬೇಕಾದರೆ, ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್​ (Noisefit Crew Smart watch) 1.38 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಇದರಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ವಿಶೇಷವಾಗಿದೆ. ಬಜೆಟ್ ದರದ ಈ ಸ್ಮಾರ್ಟ್ ವಾಚ್ ಅತ್ಯದ್ಭುತ ಫೀಚರ್, ಆಕರ್ಷಕ ವಿನ್ಯಾಸ ಹೊಂದಿದೆ. ಹಾಗೇ ಗ್ರಾಹಕರಿಗೆ ಭಾರೀ ಅಗ್ಗದ ಬೆಲೆಗೆ ಲಭ್ಯವಾಗಲಿದೆ.

ಈ ಸ್ಮಾರ್ಟ್​ವಾಚ್​ ಫಿಟ್ನೆಸ್ ಮತ್ತು ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಜೊತೆಗೆ ಹೃದಯ ಬಡಿತ ಮಾಪನ ವೈಶಿಷ್ಟ್ಯವನ್ನು ಹೊಂದಿದೆ. ಈ ವಾಚ್ ಅನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಏಳು ದಿನ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ. 100ಕ್ಕೂ ಅಧಿಕ ಆಕರ್ಷಕ ವಾಚ್ ಫೇಸ್, ಸ್ಫೋರ್ಟ್ಸ್, ಫಿಟ್ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಈ ಹೊಸ ಕ್ರೂ ಸ್ಮಾರ್ಟ್​ವಾಚ್​ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ :

ದೇಶದ ಮಾರುಕಟ್ಟೆಯಲ್ಲಿ ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್ ಬೆಲೆ ₹1,499 ಆಗಿದೆ. ಜನಪ್ರಿಯ ತಾಣವಾದ ಫ್ಲಿಪ್​ಕಾರ್ಟ್ (Flipkart) ಮತ್ತು ಕಂಪನಿಯ ಅಧಿಕೃತ ಗೊನಾಯ್ಸ್.ಕಾಂ ವೆಬ್​ಸೈಟ್ ಮೂಲಕ ಈ ಸ್ಮಾರ್ಟ್ ವಾಚ್ ಗ್ರಾಹಕರಿಗೆ ಲಭ್ಯವಾಗುತ್ತದೆ. ಹಾಗೆಯೇ ಕಪ್ಪು, ನೀಲಿ, ಬೂದು, ಹಸಿರು ಮತ್ತು ಗುಲಾಬಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಆ್ಯಪಲ್ ಐಫೋನ್(iPhone) ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ (Android smartphone) ಜೊತೆ ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್ ಬಳಸಬಹುದು ಎಂದು ಕಂಪನಿ ತಿಳಿಸಿದೆ.