ಶನಿವಾರ, 24 ಅಕ್ಟೋಬರ್ 2026

Link RC With Aadhaar: ಮಾಲಿಕರೇ, ಇಂದೇ ನಿಮ್ಮ ವಾಹನದ RCಗೆ ಆಧಾರ್ ಲಿಂಕ್ ಮಾಡಿ – ಬಂತು ಮತ್ತೊಂದು ಹೊಸ ನಿಯಮ !

ವಾಹನಗಳ ನೋಂದಣಿ ಸೇರಿದಂತೆ 2021 ರಿಂದ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ.

Link RC With Aadhaar

Link RC With Aadhaar: ಇದೀಗ ಹೊಸ ವಾಹನಗಳ ನೋಂದಣಿ ಸೇರಿದಂತೆ 2021 ರಿಂದ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. RC ಜೊತೆಗೆ Aadhar ಲಿಂಕ್ ಕಡ್ಡಾಯಗೊಳಿಸುವ (Link RC With Aadhaar) ಮೂಲಕ ವಾಹನ ನೋಂದಣಿ ಮತ್ತು ಇತರ ಪ್ರಕ್ರಿಯೆಗಳಲ್ಲಿ ನಕಲಿ ವಹಿವಾಟುಗಳನ್ನು ತಡೆಯಲು ಸರ್ಕಾರ ಮುಂದಾಗಿದೆ.

ಈ ಹಿಂದೆ ಪಡೆಯಲಾದ ಆಧಾರ್‌ ಕಾರ್ಡ್‌ನಲ್ಲಿ ಹಾಗು RC ಅಲ್ಲಿ ಹೆಸರಿನ ಜೊತೆಗೆ ಇನಿಷಿಯಲ್ ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ. ಒಂದು ವೇಳೆ ಆಧಾರ್‌ ಕಾರ್ಡ್‌ ಮತ್ತು ಆರ್‌ಸಿಯಲ್ಲಿ ಹೆಸರು ಮತ್ತು ಮೊಬೈಲ್‌ ಫೋನ್‌ ಸಂಖ್ಯೆ ಬೇರೆ ಬೇರೆಯಾಗಿದ್ದರೆ ವಾಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಾಗಲಿದೆ.

ಆಧಾರ್ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ಸೇರಿಸುವ ಮೂಲಕ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ವ್ಯಕ್ತಿಯು ಒನ್-ಟೈಮ್ ಪಾಸ್ವರ್ಡ್ ಅನ್ನು ಸ್ವೀಕರಿಸುತ್ತಾನೆ. ಈ ಪಾಸ್ವರ್ಡ್ ಆಧಾರದ ಮೇಲೆ ಒಬ್ಬರು ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬಹುದಾಗಿದೆ. ಆಧಾರ್ ಲಿಂಕ್ ಮಾಡಲಾದ ಸಂಖ್ಯೆಯನ್ನು ಸೇರಿಸಲು MVD ತನ್ನ ವಾಹನ ಸಾಫ್ಟ್ವೇರ್ ನಲ್ಲಿ 3 ಹೊಸ ಕ್ಷೇತ್ರಗಳನ್ನು ಸೇರಿಸಿದೆ. ಮಾಲೀಕರ ಆಧಾರ್ ಸಂಖ್ಯೆ, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಅರ್ಜಿಯಲ್ಲಿನ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳು ಹೊಂದಾಣಿಕೆಯಾಗದಿದ್ದರೆ ನೋಂದಣಿಯನ್ನು ನಿರಾಕರಿಸಲಾಗುತ್ತದೆ.

ವಾಹನ ಸಂಬಂಧಿತ ವಹಿವಾಟುಗಳಲ್ಲಿ ಆಧಾರ್ ಸಂಖ್ಯೆ ಇದ್ದರೆ ಪ್ರತಿ ವ್ಯಕ್ತಿಯ ಬಳಿ ಇರುವ ವಾಹನಗಳ ಸಂಖ್ಯೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಯಲು ಸರ್ಕಾರಕ್ಕೆ ಸುಲಭವಾಗಲಿದೆ.
ಈ ಕಾರಣಕ್ಕೆ ತಪ್ಪದೆ Aadhar Card ಹಾಗೂ RC ಲಿಂಕ್ ಮಾಡಿ
ಆಧಾರ್‌ನಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು RC ಅಲ್ಲಿ ಕೂಡ ನಮೂದಿಸಬೇಕಾಗುತ್ತದೆ.

 

ಇದನ್ನು ಓದಿ: Government Employees: ರಾಜ್ಯ ಸರ್ಕಾರಿ ನೌಕರರೇ ಗಮನಿಸಿ, ಈ ತಿಂಗಳ 16ರೊಳಗೆ ನಿಮಗೆ ಸಿಗಲಿದೆ ಭರ್ಜರಿ ಸುದ್ದಿ !

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ