Government Employees: ರಾಜ್ಯ ಸರ್ಕಾರಿ ನೌಕರರೇ ಗಮನಿಸಿ, ಈ ತಿಂಗಳ 16ರೊಳಗೆ ನಿಮಗೆ ಸಿಗಲಿದೆ ಭರ್ಜರಿ ಸುದ್ದಿ !

Good news for state government employees within 16th of this month

Government Employees : ರಾಜ್ಯ ಸರ್ಕಾರಿ ನೌಕರರೇ ಈ ತಿಂಗಳ 16ರೊಳಗೆ ನಿಮಗೆ ಸಿಗಲಿದೆ ಭರ್ಜರಿ ಸುದ್ದಿ. ಹೌದು, 7ನೇ ವೇತನ ಆಯೋಗ ಸಂಪೂರ್ಣವಾಗಿ ತನ್ನ ಕೆಲಸ ಮುಗಿಸಿದೆ. ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವ ಹಂತಕ್ಕೆ ಬಂದಿದೆ. ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನ.16ರೊಳಗೆ ವರದಿ ಕೊಡುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಷಡಕ್ಷರಿ ಅವರು, ಗ್ಯಾರಂಟಿಯಲ್ಲಿ ಸರ್ಕಾರಿ ನೌಕರರಿಗೆ (Government Employees) ವೇತನದ ಸಮಸ್ಯೆ ಬರಲ್ಲ. ಈಗಾಗಲೇ ಸರ್ಕಾರ ನಮಗೆ ಶೇ.17ರಷ್ಟು ವೇತನ ಹೆಚ್ಚಿಸಿದೆ. ರಾಜ್ಯದ ಬಜೆಟ್‌ 3.25 ಲಕ್ಷ ಕೋಟಿ ರೂ. ಇದೆ. ಹಿಂದಿನ ಸರ್ಕಾರ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದಿತ್ತು. ನಾವು 40 ಪರ್ಸೆಂಟ್‌ ವೇತನ ಕೇಳಿದ್ದೇವೆ. ಆಯೋಗ ಶಿಫಾರಸು ಮಾಡಿದ ಮೇಲೆ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದರು.

ಅಂದಹಾಗೆ, ಸರ್ಕಾರಿ ನೌಕರರು ಮೃತಪಟ್ಟರೆ ಅವರಿಗೆ ವಿಮೆ ಹೊರತುಪಡಿಸಿ ವೇತನ ಖಾತೆ ಇರುವ ಬ್ಯಾಂಕ್‌ನಲ್ಲಿ ಇನ್ಸೂರೆನ್ಸ್‌ ಕವರೇಜ್‌ ಮಾಡುವ ಕುರಿತು ಬ್ಯಾಂಕ್‌ಗಳಿಗೆ ಮಾತನಾಡಿದ್ದೇವೆ.
ಸರ್ಕಾರಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡುವ ಕುರಿತು ಸಭೆ ನಡೆದಿದೆ. ಬ್ಯಾಂಕ್‌ನವರು ತಾತ್ವಿಕವಾಗಿ ಒಪ್ಪಿದ್ದಾರೆ, ಅನುಕಂಪದ ನೌಕರಿ ಸ್ಥಗಿತ ಮಾಡಿಲ್ಲ, ಸರ್ಕಾರ ಅದನ್ನು ಮಾಡಿಯೇ ಮಾಡುತ್ತದೆ ಎಂದರು.

 

ಇದನ್ನು ಓದಿ: ಹಲ್ಲಿನ ಮೇಲಿರೋ ಹಳದಿ ಕಲೆ ನಿಮ್ಮನ್ನು ಮುಜುಗರ ಗೊಳಿಸುತ್ತಿದೆಯೇ, ಹಾಗಿದ್ದರೆ ಕೂಡಲೇ ಇದನ್ನು ಬಳಸಿ ನಿಮ್ಮ ಅಂದವನ್ನು ಹೆಚ್ಚಿಸಿ

Leave A Reply

Your email address will not be published.