ICC World Cup 2023: ರಾಷ್ಟ್ರಗೀತೆ ಹಾಡಲು ಆಟಗಾರರೊಂದಿಗೆ ಮಕ್ಕಳು ಬರೋದ್ಯಾಕೆ ?! ಇಲ್ಲಿದೆ ನೋಡಿ ಅಸಲಿ ಕಾರಣ

ICC World Cup 2023: the reason behind children accompany players during national anthem news

ICC World Cup 2023: ಕ್ರೀಡೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ರಾಷ್ಟ್ರಗೀತೆ ಹಾಡುವಾಗ ಆಟಗಾರರೊಂದಿಗೆ ಮಕ್ಕಳು ಇರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಮಕ್ಕಳು(Childrens)ಆಟಗಾರರ ಜೊತೆಗೆ ರಾಷ್ಟ್ರ ಗೀತೆ ಹಾಡುವಾಗ ಜೊತೆಗಿರಲು ಕಾರಣವೇನು ಗೊತ್ತಾ?

ಕ್ರಿಕೆಟ್ ಇಲ್ಲವೇ ಫುಟ್‌ಬಾಲ್ ಆಟಗಳು ಆರಂಭವಾಗುವ ಮುನ್ನ ರಾಷ್ಟ್ರಗೀತೆಯ ಸಮಯದಲ್ಲಿ ಮಕ್ಕಳು ಆಟಗಾರರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಈ ನಿಯಮವನ್ನು ಕ್ರಿಕೆಟ್ ವಿಶ್ವಕಪ್‌ನಲ್ಲೂ (ICC World Cup 2023)ಕೂಡ ನೀವು ಗಮನಿಸಿರಬಹುದು.ಈ ನಿಯಮ ಮೊದಲ ಬಾರಿಗೆ ಫುಟ್ಬಾಲ್ ಆಟದಲ್ಲಿ ಆರಂಭವಾಯಿತಂತೆ. ಆ ಬಳಿಕ ಈ ನಿಯಮವನ್ನು ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ಕೂಡ ಅಳವಡಿಸಲಾಗಿದೆ. ಅಷ್ಟಕ್ಕೂ ಈ ನಿಯಮ ಅನುಸರಿಸಲು ಕಾರಣವೇನು?

ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿರುತ್ತದೆ. ಮುಗ್ಧತೆಯ ಪ್ರತೀಕವೇ ಮಕ್ಕಳು ಎಂದರು ತಪ್ಪಾಗದು. ಅವರಿಗೆ ಅಸೂಯೆ ಇರುವುದಿಲ್ಲ. ಆಟಗಾರರು ಕೂಡ ಮಕ್ಕಳಂತೆ ಪಾರದರ್ಶಕವಾಗಿ ಕ್ರಿಕೆಟ್ ಆಡಬೇಕು ಜೊತೆಗೆ ಶಾಂತಿಯ ಸಂದೇಶ ಸಾರಲು ಮಕ್ಕಳನ್ನು ಕರೆಸಲಾಗುತ್ತದೆ.ಇದರ ಜೊತೆಗೆ, ಎದುರಾಳಿಗಳನ್ನು ಸ್ನೇಹಿತರಂತೆ ಪರಿಗಣಿಸಿ, ಮಕ್ಕಳು ಅಲ್ಲೇ ಉಳಿದುಕೊಳ್ಳುತ್ತಾರೆ ಎಂಬುದು ಬಲ್ಲವರ ಎಣಿಕೆ.

ಆಟದ ಮೈದಾನದಲ್ಲಿ ಎರಡೂ ತಂಡಗಳ ಆಟಗಾರರು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ತೋರಿಸಲು ರಾಷ್ಟ್ರಗೀತೆಯ ಸಮಯದಲ್ಲಿ ಮಕ್ಕಳನ್ನು ಕರೆಸಲಾಗುತ್ತದೆ. ರಾಷ್ಟ್ರಗೀತೆಯ ಸಮಯದಲ್ಲಿ ಮಕ್ಕಳು ಆಟಗಾರರೊಂದಿಗೆ ಹಂಚಿಕೊಳ್ಳುವ ವಿಚಾರಗಳು ಇಲ್ಲವೇ ಮಾತುಗಳು ಅದೇ ಸಂದೇಶವನ್ನು ನೀಡುತ್ತವೆ. ಇದಲ್ಲದೆ, ಕೆಲವೊಮ್ಮೆ ಮಕ್ಕಳು ವಿವಿಧ ಎನ್‌ಜಿಒಗಳು ಮತ್ತು ಅನಾಥಾಶ್ರಮಗಳಿಂದ ಆಗಮಿಸಿರುತ್ತಾರೆ. ಈ ಮೂಲಕ ಸಂಸ್ಥೆಗಳು ಮಕ್ಕಳಿಗೆ ಧನಸಹಾಯ ಕೂಡ ನೀಡುವುದಿದೆ. ಈ ಸಂದರ್ಭ ಮಕ್ಕಳು ತಮ್ಮ ಅಚ್ಚು ಮೆಚ್ಚಿನ ಆಟಗಾರರ ಉಪಸ್ಥಿತಿಯಲ್ಲಿ ಉತ್ತಮ ವಿಚಾರಗಳನ್ನು ಪಡೆದು ಸ್ಪೂರ್ತಿ ಪಡೆಯಬಹುದು.

 

ಇದನ್ನು ಓದಿ: ದ.ಕ: ಚೈತ್ರಾ ಡೀಲ್‌ ಕೇಸ್‌; ಹಿಂದೂ ಪರ ಸ್ವಾಮೀಜಿಗೆ ಸಿಸಿಬಿಯಿಂದ ನೋಟಿಸ್‌ ಜಾರಿ!!!

Leave A Reply

Your email address will not be published.