ಶನಿವಾರ, 24 ಅಕ್ಟೋಬರ್ 2026

ಇಂದಿನಿಂದ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ – ಇಲ್ಲದೆ ಪರಿಷ್ಕೃತ ಮದ್ಯದ ದರ ಪಟ್ಟಿ

ಕರ್ನಾಟಕ ಸರ್ಕಾರವು ಮದ್ಯದ ಮೇಲಿನ ತೆರಿಗೆ ವಿಧಿಸುವ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ ಆಧಾರಿತ ಅಬಕಾರಿ ಸುಂಕ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಅಬಕಾರಿ ಇಲಾಖೆ (Excise Department), ರಾಜ್ಯದಲ್ಲಿ ಅತಿಹೆಚ್ಚು ಮಾರಾಟವಾಗುವ ಮದ್ಯ ಮತ್ತು ಬಿಯರ್’ಗಳ ಗರಿಷ್ಠ ಚಿಲ್ಲರೆ ಮಾರಾಟದ (MRP) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ನಿಯಮದ ಪ್ರಕಾರ ಮದ್ಯದ ಬ್ರ್ಯಾಂಡ್’ ಮೇಲೆ ದರ ನಿಗದಿಯಾಗದೇ, ಅದರಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ, ದರವನ್ನು ಅಬಕಾರಿ ಇಲಾಖೆ ನಿಗದಿ ಮಾಡಿದೆ.

ಪರಿಷ್ಕೃತ ಮದ್ಯದ ದರ ಪಟ್ಟಿ

ಬ್ರ್ಯಾಂಡ್ ಹೆಸರು; 90ML ; 180ML

ಲೆಗಸಿ ಸ್ಪೆಷಲ್ ರಮ್/ವಿಸ್ಕಿ: 45 ; 90

ಕಾರ್ನಿವಲ್ ರಮ್: 55 ; 95

ಬ್ಲ್ಯಾಕ್ ಬೆಲ್ಟ್ ಫೈನ್ ಓಲ್ಡ್ ವಿಸ್ಕಿ: 55 ; 95

ಡಿಕೆ ಡಬಲ್ ಕಿಕ್ ಫೈನ್ ವಿಸ್ಕಿ: 50 ; 95

ಬೆಂಗಳೂರು ವಿಸ್ಕಿ/ಬ್ರಾಂಡಿ/ರಮ್: 55 ; 95

ಗ್ರೀನ್ ಚಾಂಪಿಯನ್ ಸುಪೀರಿಯರ್ ವಿಸ್ಕಿ ಮತ್ತು ಬ್ರಾಂಡಿ: 55 ; 105

ರಾಯಲ್ ಗೋಲ್ಡ್ ಕಪ್ ಎಕ್ಸ್‌ಟ್ರಾ ಸ್ಮೂತ್ ವಿಸ್ಕಿ: 55 ; 105

ಅಮೃತ್ಸ್ ಸಿಲ್ವರ್‌ಕಪ್ ರೇರ್ ಇಂಡಿಯನ್ ಬ್ರಾಂಡಿ: 50 ; 95

ಮ್ಯಾಜಿಕ್ ಬ್ಲೆಂಡೆಡ್ ಫೈನ್ ವಿಸ್ಕಿ: 50 ; 95

ತ್ರೀ ಏಸಸ್ ವಿಸ್ಕಿ: 55 ; 95

ರಾಜಾ ವಿಸ್ಕಿ/ರಮ್: 55; 110

ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ: 55; 110

ಬಾಗ್ ಪೈಪರ್ ಡಿಲಕ್ಸ್ ವಿಸ್ಕಿ: 80 ; 155

ಮೆಕ್ ಡೊವೆಲ್ಸ್ ನಂ.1 ಸೆಲೆಬ್ರೇಷನ್ ಕ್ಲಾಸಿಕ್ ರಮ್: 85 ; 165

ಒರಿಜಿನಲ್ ಚಾಯ್ಸ್ ಸ್ಟಾರ್ ಸುಪ್ರೀಮ್ ವಿಸ್ಕಿ: 85 ; 165

ಆಫೀಸರ್ಸ್ ಚಾಯ್ಸ್ ಸ್ಪೆಷಲ್ ವಿಸ್ಕಿ: 90 ; 175