ಭಾನುವಾರ, 25 ಅಕ್ಟೋಬರ್ 2026

‘8 ವರ್ಷ ಸರ್ವಿಸ್ ಕೊಟ್ಟ ನನ್ನ ಫೆವರೇಟ್ ಕಾಚ ಹರಿದು ಹೋಗಿದೆ’- ವಿಡಿಯೋ ಮಾಡಿ ಹರಿಬಿಟ್ಟ ಯುವತಿ

ಇಂದು ಸೋಶಿಯಲ್ ಮೀಡಿಯಾಗಳು ಫೇಮಸ್ ಆಗುವುದು, ಜ್ಞಾನ ವೃದ್ಧಿ ಮಾಡಿಕೊಳ್ಳುವುದು, ಮಾತ್ರವಲ್ಲ ಜನರ ಭಾವನೆಗಳನ್ನು ತೋಡಿಕೊಳ್ಳಲು ಕೂಡ ಒಂದು ಮುಖ್ಯ ವೇದಿಕೆಯಾಗಿ ನಿಂತಿದೆ. ಅಂತೆಯೇ ಇಂದು ಅನೇಕರು ತಮಗೆ ಬೇಜಾರಾದಾಗ, ಸಂತೋಷವಾದಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವುಗಳನ್ನು ಹೇಳಿಕೊಳ್ಳುವುದುಂಟು. ಕೆಲವೊಮ್ಮೆ ಕೆಲವೊಬ್ಬರು ತಮ್ಮ ನೋವುಗಳನ್ನು ಇಲ್ಲಿ ತೋಡಿಕೊಳ್ಳುತ್ತಾರೆ. ಅಂತೆಯೇ ಇದೀಗ ಇಲ್ಲೊಬ್ಬಳು ಯುವತಿ ವಿಡಿಯೋ ಮಾಡಿ ತನಗಾದ ಬೇಸರದ ಸಂಗತಿ ಒಂದನ್ನು ಹೇಳಿದ್ದಾಳೆ. ಆಕೆಗೆ ಬೇಜಾರು ಆದ ಸಂಗತಿ ಏನೆಂದರೆ ಅವಳಿಗೆ ತುಂಬಾ ವರ್ಷ ಸರ್ವಿಸ್ ಕೊಟ್ಟಿರುವ ಕಾಚ ಹರಿದು ಹೋಗಿರುವುದು!!

Sponsored

ಹೌದು.. @Megha_thavoor ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಯುವತಿ ಒಬ್ಬಳು ತನ್ನ ಕಾಚ ಹರಿದಿರುವ ಕುರಿತು ಅಳಲನ್ನು ತೋಡಿಕೊಂಡಿದ್ದಾಳೆ. ವಿಡಿಯೋದಲ್ಲಿ ಅವರು ಆರಂಭದಿಂದಲೂ ಅದರ ಬಗ್ಗೆ ಮಾತನಾಡುತ್ತಾಳೆ. ಮೊದಲಿಗೆ “ಎಷ್ಟೋ ವರ್ಷ ನನಗೆ ಸರ್ವೀಸ್ ಕೊಟ್ಟಿರುವ ನನ್ನ ಫೇವರೆಟ್ ಬಾಕ್ಸರ್ ಕಾಚ ಇಂದು ಹರಿದು ಹೋಗಿದೆ. ನಾನು ಜೀವನದಲ್ಲಿ ಎಷ್ಟೋ ಶಾರ್ಟ್ಸ್ ಕೊಂಡಿದ್ದೇನೆ. ಆದರೆ ಇದರಷ್ಟು ಕಂಫರ್ಟ್ ನನಗೆ ಬೇರೆ ಯಾವುದು ಕೊಟ್ಟಿಲ್ಲ” ಎಂದು ಹೇಳಿದ್ದಾರೆ.

Marriage AdMarriage AdSponsored

ಮುಂದುವರಿದು “ನಿಮಗೆ ಅನಿಸಬಹುದು ಈ ಹುಡುಗಿ ಇದನ್ನು ಯಾಕೆ ವಿಡಿಯೋ ಮಾಡಿ ಹಾಕುತ್ತಿದ್ದಾಳೆ ಎಂದು. ಆದರೆ ನಮಗೆ ಹಣ ಮುಖ್ಯವಲ್ಲ, ಅದರ ಕ್ವಾಲಿಟಿ ಮುಖ್ಯವಾಗುತ್ತದೆ. ಎಷ್ಟು ಸಮಯ ಬಾಳಿಕೆ ಬರುತ್ತದೆ ಎಂಬುದು ಅನಿವಾರ್ಯ. ಅಲ್ಲದೆ ಅದರೊಂದಿಗಿರುವ ಕನೆಕ್ಷನ್ ಮುಖ್ಯ. ಇದನ್ನು ನಾನು ಯಾವಾಗಲೋ ರಸ್ತೆ ಬದಿಯಲ್ಲಿ 150 ರೂಪಾಯಿ ಕೊಟ್ಟು ಕೊಂಡದ್ದು. ಆದರೆ ಅದು ನನಗೆ ಎಂಟು ವರ್ಷಗಳ ಕಾಲ ಸರ್ವಿಸ್ ಕೊಟ್ಟಿದೆ. ಇದಕ್ಕೆ ಇಂದು ಭಾವಪೂರ್ಣ ಶ್ರದ್ಧಾಂಜಲಿ. ಮತ್ತೆ ಹುಟ್ಟಿ ಬಾ” ಎಂದು ಹೇಳಿದ್ದಾರೆ. ಅದಕ್ಕೆ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.

https://www.instagram.com/reel/DY_uvKOJ5jC/?igsh=MWhwczIxcjdoenB3eg==