ಪ್ರೀತಿಸಿದ ಗೆಳೆಯ -ಗೆಳತಿಯರ ಅದ್ಧೂರಿ ವಿವಾಹ ಮಹೋತ್ಸವ ನಡೆದು ಮದುವೆ ಮಂಟಪದ ಬಳಿ ನವ ಜೋಡಿಗಳು ಹನಿಮೂನ್‌ಗೆ ತೆರಳಲು ಹೆಲಿಕಾಪ್ಟರ್ ರೆಡಿಯಾಗಿ ನಿಂತಿತ್ತು. ಆದರೆ ಇದೇ ಹೆಲಿಕಾಪ್ಟರ್ ಪತನಗೊಂಡು ಪೈಲೆಟ್, ನವ ವರ ದಾವೆ ಫಿಜಿ ದುರಂತ ಅಂತ್ಯಕಂಡ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
Sponsoredಅಮೆರಿಕಾದಲ್ಲಿ ನರ್ಸ್ ಆಗಿರುವ ಜೆಸ್ನಿ ಎನ್ನುವವರನ್ನು ಡಾಸನ್‌ವಿಲ್ಲೆಯಲ್ಲಿ ಮೇ.29ರ ಶುಕ್ರವಾರ ವಿವಾಹವಾಗಿದ್ದರು. ಈ ಜೋಡಿ ವಿವಾಹ ಸಂಭ್ರಮದಲ್ಲಿರುವಾಗಲೇ ಬಾಳಿನಲ್ಲೇ ಮರೆಯಲಾಗದ ದುರಂತ ಸಂಭವಿಸಿದೆ. ರಾಬಿನ್ಸನ್ R66 ಹೆಲಿಕಾಪ್ಟರ್ ಮೂಲಕ ಇಬ್ಬರು ಜೋಡಿಯು ಹನಿಮೂನ್‌ಗೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಹನಿಮೂನ್‌ಗೆ ಡೆಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಹೆಲಿಕಾಪ್ಟರ್ ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲೇ ಮದುವೆ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಮೌಂಟ್ ವೆರ್ನಾನ್ ಡ್ರೈವ್ ಸಮೀಪದ ಡಾಸನ್ ಕೌಂಟಿಯ ಎಂಬ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.
Marriage AdSponsoredಈ ವೇಳೆ ದಾವೆ ಫೌಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ನವ ವಧು ಜೆಸ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಜೆಸ್ನಿಯನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಇನ್ನಷ್ಟೇ ತಿಳಿಯಬೇಕಿದೆ. ಪತನವಾದ ಹೆಲಿಕಾಪ್ಟರ್ ಪತ್ತೆ ಹಚ್ಚುವುದಕ್ಕೆ ರಕ್ಷಣಾ ತಂಡಗಳು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆ.



