ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ!!
5 ಮುಸ್ಲಿಂ ವಿದ್ಯಾರ್ಥಿಗಳು ಗೋಮಾಂಸ ತಂದು ಇಬ್ಬರು ಹಿಂದೂ ವಿದ್ಯಾರ್ಥಿಗಳಿಗೆ ಆ ಮಾಂಸವನ್ನು ಬಲವಂತವಾಗಿ ತಿನ್ನಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Sponsoredಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಕೃಷ್ಣೈನ ಹಬ್ರಘಾಟ್ ಉನ್ನತ ಮಾಧ್ಯಮಿಕ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. 9ನೇ ತರಗತಿಯ 5 ಮುಸ್ಲಿಂ ವಿದ್ಯಾರ್ಥಿಗಳು ಗೋಮಾಂಸ ತಂದು ಇಬ್ಬರು ಹಿಂದೂ ವಿದ್ಯಾರ್ಥಿಗಳಿಗೆ ಆ ಮಾಂಸವನ್ನು ಬಲವಂತವಾಗಿ ತಿನ್ನಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ ಮತ್ತು ಒಬ್ಬ ವಿದ್ಯಾರ್ಥಿಯ ತಾಯಿ ನೂರ್ ಸಾಹಿದಾ ಬೇಗಂ ಅವರನ್ನು ಬಂಧಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳು ಚಮಚದಲ್ಲಿ ಗೋಮಾಂಸದ ತುಂಡುಗಳನ್ನು ತೆಗೆದುಕೊಂಡು ಅದನ್ನು ಹಿಂದೂ ವಿದ್ಯಾರ್ಥಿಗಳ ಬಾಯಿಯ ಹತ್ತಿರ ಕೊಂಡೊಯ್ದು ಬಲವಂತವಾಗಿ ತಿನ್ನಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಏನು ಎಂಬುದನ್ನು ಅರಿತ ಹಿಂದೂ ವಿದ್ಯಾರ್ಥಿಗಳು ಕೂಡಲೇ ಚಮಚವನ್ನು ತಳ್ಳಿಹಾಕಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಶಿಕ್ಷಕರಿಗೆ ಈ ವಿಷಯ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಆದರೆ ಶಾಲಾ ಆಡಳಿತ ಮಂಡಳಿಯು ಈ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿ, ಸಂತ್ರಸ್ತ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ ಎಂದು ಸೂಚಿಸಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ತಿಳಿಹೇಳಿ, ಅವರು ಇಂತಹ ಕೃತ್ಯವನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂದು ಅವರಿಂದ ತಪ್ಪೊಪ್ಪಿಗೆಯನ್ನು ಬರೆಸಿಕೊಂಡಿದೆ. ನಂತರ ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.




