ಸೋಮವಾರ, 26 ಅಕ್ಟೋಬರ್ 2026
Trending

ಮೋದಿ ಹುಟ್ಟುಹಬ್ಬ: ಇಂದಬೆಟ್ಟು ಗ್ರಾಮದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪೂಜೆ, ಪ್ರಾರ್ಥನೆ

ಇಂದಬೆಟ್ಟು : ಸೆ 17 ವಿಶ್ವ ನಾಯಕ ಭಾರತದ ಜನಪ್ರಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 76ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದಬೆಟ್ಟು ಗ್ರಾಮದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಮೋದಿಯವರ ಆಯುಷ್ಯ ಆರೋಗ್ಯ ಹಾಗೂ ಇನ್ನಷ್ಟು ದೇಶ ಸೇವೆ ಸಲ್ಲಿಸಲು ಶಕ್ತಿ ನೀಡಲೆಂದು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಯಿತು.

Sponsored

ಮೋದಿಯವರ ಅಭಿಮಾನಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದರು. ಮಹಮ್ಮಾಯಿ ಮಾರಿಗುಡಿ ಬೆದ್ರಬೆಟ್ಟು,ಬಂಗಾಡಿ ಮಹಾ ಗಣಪತಿ ದೇವಸ್ಥಾನ ಹಾಗೂ ಸಹಸ್ರ ನಾಗಬನ ಕ್ಷೇತ್ರ,ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನ, ಬಂಗಾಡಿ ಶಾಂತಿನಾಥ ಸ್ವಾಮಿ ಬಸದಿ ಕ್ಷೇತ್ರ,ಶ್ರವಣ ಗುಂಡ ಕ್ಷೇತ್ರ,ಮಹಮ್ಮಾಯಿ ಮಾರಿಗುಡಿ ಕಲ್ಲಾಜೆ ಶಾಂತಿನಗರ ಕ್ಷೇತ್ರ,ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕರುವಳ್ಳ ಕಲ್ಲಗುಂಡ ಕ್ಷೇತ್ರಗಳಲ್ಲಿ ಬಿಜೆಪಿ ಇಂದಬೆಟ್ಟು ಶಕ್ತಿಕೇಂದ್ರ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.