ದೇಶದ ವಿವಿಧ ಮಾರುಕಟ್ಟೆಗಳಿಗೆ ಇದೀಗ ಐಫೋನ್ 18 ಪ್ರೊ ಲಗ್ಗೆ ಇಟ್ಟಿದೆ. ಫೋನ್ ಕೊಳ್ಳಲು ಅಂಗಡಿಗಳ ಮುಂದೆ ಜನರು ಕಿಲೋ ಮೀಟರ್ ಗಂಟಲೆ ಕ್ಯೂ ನಿಂತು ಕಾಯುತ್ತಿದ್ದಾರೆ. ಇದರ ನಡುವೆ ಗಂಡನೊಬ್ಬ ಚಿನ್ನವನ್ನು ಮಾರಿ ತನ್ನ ಹೆಂಡತಿಗೆ ಐಫೋನ್ 18 ಪ್ರೊ ಕೊಡಿಸಿರುವ ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ.
Sponsoredಹೌದು, ನೋಯ್ಡಾದಲ್ಲಿರುವ ಆಪಲ್ ಸ್ಟೋರ್ ನಲ್ಲಿ ಒಬ್ಬರು, ತಮ್ಮ ಪತ್ನಿಗಾಗಿ ‘ಐಫೋನ್ 18 ಪ್ರೊ’ (iPhone 18 Pro) ಖರೀದಿಸುವ ಸಲುವಾಗಿಯೇ ತಾವು ಚಿನ್ನವನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಮಳಿಗೆ ಆರಂಭವಾಗುವ 8 ಗಂಟೆಯ ಮೊದಲೇ ಉದ್ದನೆಯ ಸಾಲು ಕಂಡುಬಂದಿತ್ತು. ಆದರೂ ನಾನು ನನ್ನ ಪತ್ನಿಗಾಗಿ ಐಫೋನ್ 18 ಪ್ರೊ ಖರೀದಿಸುತ್ತಿದ್ದೇನೆ. ಮುಂದಿನ ದಿನ ನನ್ನ ಬಳಿ ಹಣ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಇದೀಗ ನನ್ನ ಬಳಿ ಚಿನ್ನವಿದೆ ಅದನ್ನು ಮಾರಿ ನನ್ನ ಹೆಂಡತಿಗೆ ಐಫೋನ್ ಕೊಡಿಸಿದ್ದೇನೆ ಎಂದು ಅವರು ಹೇಳಿದ್ದಾರೆ.




