ಮೋದಿಯನ್ನು ಜೆನ್‌ಝೀ ಅಟ್ಟಾಡಿಸಿ ಹೊಡೀತಾರೆ-ಖರ್ಗೆ ಎಚ್ಚರಿಕೆ
ಕಲಬುರಗಿ ಆ.23: ಅಧಿಕಾರದ ವ್ಯಾಮೋಹದಿಂದ ದೇಶವನ್ನೇ ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಜೆನ್‌ಝೀಗಳು ಬೆನ್ನಟ್ಟಿ ಹೊಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
Sponsoredಶನಿವಾರ ಸುಮೇಧ ಪ್ರಕಾಶನ ಹೊರತಂದಿರುವ ʼಧೀಮಂತ ಧುರಿಣ ಡಾ.ಮಲ್ಲಿಕಾರ್ಜುನ ಖರ್ಗೆʼ ಅಭಿನಂದನಾ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ಅಧಿಕಾರ ಬೇಕು, ದೇಶ ಬೇಡ. ವಂದೇ ಮಾತರಂ 2 ಚರಣ ಹೇಳ್ತೀವಿ ಅಂದ್ರೆ ದೇಶದ್ರೋಹಿ ಎನ್ನೋದು, ಪ್ರಗತಿಪರ ಚಿಂತಕರಿಗೆ ದಿಮಾಗಿ ನಕ್ಸಲ್ ಅನ್ನೋದನ್ನೆಲ್ಲಾ ಬಿಟ್ಟು ಯುವಕರಿಗೆ ಶಿಕ್ಷಣ ಕೊಡಿ, ಪರೀಕ್ಷೆ ಸರಿಯಾಗಿ ನಡೆಸಿ. ಕೋಮು ಭಾವನೆ ಕೆರಳಿಸುವ ನಿಮ್ಮ ಧೋರಣೆಯನ್ನು ಇದೇ ರೀತಿ ಮುಂದುವರಿಸಿದರೆ ಈ ದೇಶದ ಯುವಕರು ನಿಮ್ಮನ್ನು ಹಂಗೇ ಬಿಡೋದಿಲ್ಲ, ಅಟ್ಟಾಡಿಸಿಕೊಡು ಬರ್ತಾರೆ ಎಂದು ಮೋದಿ- ಶಾಗೆ ಚಾಟಿ ಬೀಸಿದರು.




