ಶನಿವಾರ, 24 ಅಕ್ಟೋಬರ್ 2026

7.8% ಜಿಡಿಪಿ ಬೆಳವಣಿಗೆ: ಚಿನ್ನ, ವಿದೇಶಿ ಪ್ರವಾಸ, ದುಬಾರಿ ಮದುವೆಗೆ ಪ್ರಧಾನಿ ಮೋದಿ ಕಡಿವಾಣದ ಕರೆ

ನವದೆಹಲಿ: ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಕರೆ ನೀಡಿದ್ದಾರೆ.

ಮಾಫಿ ಸಾಕ್ಷಿ ವಿಚಾರಕ್ಕೆ ಆರೋಪಿ ದರ್ಶನ್ ಸವಾಲ್? ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ

ಮಂಗಳವಾರ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚಿನ್ನ ಖರೀದಿ, ವಿದೇಶ ಪ್ರವಾಸ ಹಾಗೂ ವಿದೇಶಗಳಲ್ಲಿ ಅದ್ಧೂರಿಯಾಗಿ ಮದುವೆ ಆಯೋಜಿಸುವಂತಹ ವೆಚ್ಚಗಳನ್ನು ಸಾಧ್ಯವಾದಷ್ಟು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ದೇಶದ ಆರ್ಥಿಕ ಶಕ್ತಿಯನ್ನು ಮತ್ತಷ್ಟು ಬಲಪಡಿಸಲು ಸ್ವಾವಲಂಬನೆಯತ್ತ ಗಮನಹರಿಸುವುದು ಮುಖ್ಯ ಎಂದಿದ್ದಾರೆ.

ಮಾಫಿ ಸಾಕ್ಷಿ ವಿಚಾರಕ್ಕೆ ಆರೋಪಿ ದರ್ಶನ್ ಸವಾಲ್? ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ

ಜಾಗತಿಕವಾಗಿ ಯುದ್ಧದ ಪರಿಸ್ಥಿತಿ, ವಿವಿಧ ಆರ್ಥಿಕ ಬಿಕ್ಕಟ್ಟುಗಳು ಮತ್ತು ಪೂರೈಕೆ ಸರಪಳಿಯಲ್ಲಿನ ಸಮಸ್ಯೆಗಳ ನಡುವೆಯೂ ಭಾರತವು ಶೇ.7.8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿರುವುದು ಗಮನಾರ್ಹ ಸಾಧನೆ ಎಂದು ಮೋದಿ ಬಣ್ಣಿಸಿದ್ದಾರೆ.

ಮಾಫಿ ಸಾಕ್ಷಿ ವಿಚಾರಕ್ಕೆ ಆರೋಪಿ ದರ್ಶನ್ ಸವಾಲ್? ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ

ಈ ಬೆಳವಣಿಗೆಯ ಹಿಂದೆ ದೇಶದ ಜನರ ಪರಿಶ್ರಮ, ಸಾಮೂಹಿಕ ಪ್ರಯತ್ನ ಮತ್ತು ದೃಢ ಸಂಕಲ್ಪವಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕ ಪ್ರಗತಿಯ ವೇಗವನ್ನು ಮುಂದುವರಿಸಲು ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಅಗತ್ಯವಿಲ್ಲದ ಖರ್ಚುಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.