ಹಸು ಕದ್ದು, ಅಕ್ರಮವಾಗಿ ಅದನ್ನು ಕಡಿದ ಆರೋಪದ ಮೇಲೆ ಪಣಂಬೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ
ಮೊಹಮ್ಮದ್ ಫಹಾದ್ ಮತ್ತು ಮೊಹಮ್ಮದ್ ನೌಫಲ್ ಬಂಧಿತರು. ಕಸಬಾ ಬೆಂಗ್ರೆ ಗ್ರಾಮದ ಜುಮ್ಮಾ ಮಸೀದಿ ಬಳಿ ಆರೋಪಿ. ಆರೋಪಿಗಳಿಂದ ₹43,100 ಮೌಲ್ಯದ 143.8 ಕೆ.ಜಿ ಮಾಂಸ ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಫಹಾಸ್ ಮನೆ ಹಿಂಭಾಗದಲ್ಲಿ ಜಾನುವಾರು ವಧೆ ಮಾಡಿ, ಮಾಂಸ ಮಾಡುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ, ಇನ್ನಿಬ್ಬರು ಆರೋಪಿಗಳು ಓಡಿ ಹೋಗಿ ದ್ದಾರೆ. ಇಬ್ಬರನ್ನು ಬಂಧಿಸ ಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ಹಳದಿ ಬಣ್ಣದ ಚೀಲಗಳಲ್ಲಿ ತುಂಬಿಸಿಟ್ಟಿದ್ದ ದನದ ಚರ್ಮ, ಕಾಲುಗಳು ಮತ್ತು ಕಳೇಬರ, ದನದ ಕೊಂಬು ಮತ್ತು ತಲೆಯ ಭಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

