ಶನಿವಾರ, 24 ಅಕ್ಟೋಬರ್ 2026

ರೈಲಿ AC ಬೋಗಿಯಲ್ಲಿ ದೀಪ, ಅಗರಬತ್ತಿ ಹಚ್ಚಿ ದೇವರ ಪೂಜೆ ಮಾಡಿದ ವ್ಯಕ್ತಿ – ಪ್ರಯಾಣಿಕರ ಆಕ್ರೋಶ

ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡಿ ಅತಿರೇಖದ ವರ್ತನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಎಸಿ ರೈಲಿನ ಬೋಗಿಯ ಮೇಲಿನ ಬರ್ತ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿಯು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ, ಪಕ್ಕದಲ್ಲಿದ್ದ ಪ್ರಯಾಣಿಕರೊಬ್ಬರು ಆತನನ್ನು ತಡೆದು, ರೈಲಿನಲ್ಲಿ ಬೆಂಕಿ ಉರಿಸುವುದು ತಪ್ಪು ಎಂದು ತರಾಟೆಗೆ ತೆಗೆದುಕೊಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೆಟ್ಟಿಗರು ಹಾಗೂ ಪ್ರಯಾಣಿಕರು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಈ ವಿಡಿಯೊವನ್ನು ಗಮನಿಸಿರುವ ರೈಲ್ವೆ ಸೇವಾ ಕೇಂದ್ರವು ಘಟನೆ ನಡೆದ ರೈಲಿನ ಸಂಖ್ಯೆ ಮತ್ತು ಆ ಪ್ರಯಾಣಿಕನ ‘ಪಿಎನ್‌ಆರ್’ ವಿವರಗಳನ್ನು ಹಂಚಿಕೊಳ್ಳುವಂತೆ ಕೋರಿದೆ.