ಶನಿವಾರ, 24 ಅಕ್ಟೋಬರ್ 2026

ತಾನೆ ಕಟ್ಟಿ ಬೆಳೆಸಿದ ಪಕ್ಷದಿಂದ ಮಮತಾ ಬ್ಯಾನರ್ಜಿ ಉಚ್ಛಾಟನೆ!!

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಮಮತಾ ಬ್ಯಾನರ್ಜಿಯ ಪತ್ರ ಕೋಟೆ ಛಿದ್ರ ಛಿದ್ರವಾಗಿದೆ. ಚುನಾವಣೆಯ ಬಳಿಕ ತೃಣಮೂಲ ಕಾಂಗ್ರೆಸ್ಸಿನ ಶಾಸಕರು ಹಾಗೂ ಸಂಸದರು ಬಂಡಾಯವೆದ್ದು, ಪಕ್ಷದಿಂದ ಹೊರನಡೆದು, ತಮ್ಮದೇ ಮೂಲ ಟಿಎಂಸಿ ಎಂದು ಘೋಷಿಸಿಕೊಂಡಿರುವ ವಿಪಕ್ಷ ನಾಯಕ ಋತಬ್ರತ ಬ್ಯಾನರ್ಜಿ ನೇತೃತ್ವದ ಶಾಸಕರ ಬಣ ಇದೀಗ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿಯನ್ನು ಪಕ್ಷದಿಂದಲೇ ಉಚ್ಛಾಟಿಸಿದೆ! ಈ ಮೂಲಕ ತಾನೆ ಕಟ್ಟಿದ ಪಕ್ಷದಿಂದ ಮಮತಾ ಬ್ಯಾನರ್ಜಿ ಉಚ್ಚಾಟನೆಗೊಂಡಿದ್ದಾರೆ. 

ಸೋಮವಾರ ಕೋಲ್ಕತಾದ ಪಂಚತಾರಾ ಹೋಟೆಲ್‌ ನಲ್ಲಿ ವಿಶೇಷ ಸಭೆ ನಡೆಸಿದ್ದ ಟಿಎಂಸಿ ಬಂಡಾಯ ಶಾಸಕರು, ಹೌರಾ ಮಧ್ಯಾ ವಿಧಾನಸಭಾ ಕ್ಷೇತ್ರದ ಶಾಸಕ ಅರೂಪ್‌ ರಾಯ್‌ ಅವರನ್ನು ಟಿಎಂಸಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಬಳಿಕ ಬಂಡಾಯ ಬಣವು ತೃಣಮೂಲ ಪಕ್ಷದ ಸಂವಿಧಾನದ 20 ನೇ ವಿಧಿಯನ್ನು ಉಲ್ಲೇಖಿಸಿದೆ, ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಬೇಕಾಗಿತ್ತು. ಆದರೆ 2022ರ ನಂತರ ಅಂತಹ ಯಾವುದೇ ಸಭೆ ನಡೆಯದ ಕಾರಣ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಪ್ರಸ್ತಾವನೆಯೊಂದಿಗೆ ವಿಸರ್ಜಿಸಿದೆ. ನಂತರ ಋತಬ್ರತ ಬ್ಯಾನರ್ಜಿ ಬಣವು ಶಾಸಕ ಅರೂಪ್ ರಾಯ್ ಅಧ್ಯಕ್ಷತೆಯಲ್ಲಿ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿ, ಉಪಾಧ್ಯಕ್ಷ ಮತ್ತು ಖಜಾಂಚಿಯನ್ನು ಸಹ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.