ಮಂಗಳವಾರ, 27 ಅಕ್ಟೋಬರ್ 2026
Trending

Male Infertility: ಜಿಮ್‌ಗೆ ಹೋಗುವವರಲ್ಲಿ ಪುರುಷ ಬಂಜೆತನ 99% ಖಚಿತ! ತಜ್ಞರು ಹೇಳಿದ್ದೇನು?!

Infertility Problem
Image source: The Indian Express

Male Infertility: ಪುರುಷರಲ್ಲಿ ಬಂಜೆತನ ಸಮಸ್ಯೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಪುರುಷರ ಜೀವನ ಶೈಲಿ ಆಗಿದೆ. ಹೌದು, ಹಿಂದಿನ ಕಾಲದಲ್ಲಿ ಈ ಸಮಸ್ಯೆ ಮಹಿಳೆಯರಿಗೆ ಮಾತ್ರ ಎಂದು ಭಾವಿಸಲಾಗಿತ್ತು. ಆದರೆ ತಜ್ಞರ ಪ್ರಕಾರ ಬಂಜೆತನ ಸಮಸ್ಯೆಗಳು ಇಬ್ಬರಲ್ಲೂ ಇದೆ. ಆದರೆ ವಿವಿಧ ಕಾರಣಗಳಿಂದ ಬಂಜೆತನ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಈ ಕಾರಣಗಳಲ್ಲಿ ಫಿಟ್ನೆಸ್ ಕೂಡ ಒಂದು ಎಂದು ಹೇಳಲಾಗುತ್ತದೆ.

Sponsored

ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವೀರ್ಯಾಣುಗಳ ಮೇಲೆ ಫಿಟ್ನೆಸ್ ಪರಿಣಾಮದ ಕುರಿತು ನಡೆಸಲಾದ ಅಧ್ಯಯನದಲ್ಲಿ ಆಘಾತಕಾರಿ ವಿಷಯಗಳು ಹೊರಬಿದ್ದಿವೆ.

Advertisement
Advertisement

ಮುಖ್ಯವಾಗಿ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಈ ಸಮಸ್ಯೆ ಉಂಟಾಗಿದೆ ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ, ಬಂಜೆತನ ಯುಕೆಯಲ್ಲಿ ಏಳು ದಂಪತಿಗಳಲ್ಲಿ ಒಬ್ಬರ ಮೇಲೆ ಪರಿಣಾಮ ಬೀರಿದೆ. UK ನಲ್ಲಿ ನಡೆಸಿದ ಅಧ್ಯಯನವು ಫಲವತ್ತತೆ ಚಿಕಿತ್ಸೆಯ ಅಗತ್ಯವಿರುವ ಪುರುಷರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವನ್ನು ಕಂಡುಬಂದಿದೆ. ಆದರೆ ಮಹಿಳೆಯರಲ್ಲಿ, ತಡವಾಗಿ ಕುಟುಂಬ ಪ್ರಾರಂಭ, ಸ್ಟೀಮ್ ಬಾತ್, ಲ್ಯಾಪ್ಟಾಪ್ಗಳನ್ನು ಹೆಚ್ಚು ಬಳಸುವುದು ಸಹಜ ಕಾರಣಗಳಾಗಿವೆ. ಅದೇ ಪುರುಷರಲ್ಲಿ, ಜಿಮ್‌ಗೆ ಹೆಚ್ಚು ಆದ್ಯತೆ ನೀಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ.

ಯಾಕೆಂದರೆ ಫಿಟ್ನೆಸ್ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಗಿಯಾದ ಜಿಮ್ ಉಡುಗೆಗಳನ್ನು ಧರಿಸುತ್ತಾರೆ. ಲೆಗ್ಗಿಂಗ್ಸ್ ಮತ್ತು ಶಾರ್ಟ್ಸ್ ಧರಿಸಲಾಗುತ್ತೆ. ಜಿಮ್‌ನಲ್ಲಿ ವರ್ಕ್ಔಟ್ ಮಾಡುವವರು ಸುಮಾರು 12 ರಿಂದ 16 ಗಂಟೆಗಳ ಕಾಲ ಜಿಮ್‌ನಲ್ಲಿ ಇರುತ್ತಾರೆ. ಅವರು ವಾರದಲ್ಲಿ ಆರು ದಿನ ಒಂದೇ ಉಡುಪನ್ನು ಧರಿಸುತ್ತಾರೆ. ನಿರಂತರ ಬಿಗಿಯಾದ ಬಟ್ಟೆಯಿಂದ ಆ ಭಾಗದಲ್ಲಿ ಸೆಖೆ ಹೆಚ್ಚುತ್ತದೆ.. ಇದರಿಂದ ಫಲವತ್ತತೆ ಸಮಸ್ಯೆ ಹೆಚ್ಚುತ್ತದೆ ಎಂದು ತಿಳಿದು ಬಂದಿದೆ.

ಇನ್ನು ಪುರುಷ ದೇಹವು ಬಹುತೇಕ ಹೆಚ್ಚು ಶಾಖವನ್ನು ಹೊಂದಿರುತ್ತದೆ. ಹಗಲಿನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಹೆಚ್ಚು ಶಾಖ ಉತ್ಪತ್ತಿಯಾಗುತ್ತದೆ. ಇದರೊಂದಿಗೆ, ಅವರು ಸಕ್ರಿಯರಾಗುತ್ತಾರೆ, ಆದರೆ ತಜ್ಞರು ಹೇಳುವ ಪ್ರಕಾರ ವೀರ್ಯ ಕೋಶಗಳು ಶಾಖದಿಂದ ಸಾಯುತ್ತವೆ. ಇನ್ನು ಮುಖ್ಯವಾಗಿ ಜಿಮ್‌ಗೆ ಹೋಗುವುದನ್ನು ಕಡಿಮೆ ಮಾಡುವವರು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸುವವರಲ್ಲಿ ವೀರ್ಯದ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಅದರ ಗುಣಮಟ್ಟವೂ ಹೆಚ್ಚಿದೆ ಎನ್ನಲಾಗಿದೆ. ಆದ್ದರಿಂದ ಅತಿಯಾದ ವ್ಯಾಯಾಮವು ವೀರ್ಯ ಉತ್ಪಾದನೆಗೆ ಹಾನಿಕಾರಕವಾಗಿದೆ ಎಂದು ಈ ಅಧ್ಯಯನವು ತೋರಿಸಿದೆ.

ಪುರುಷ ಬಂಜೆತನ ನಿವಾರಣೆಗಾಗಿ, ಸಾಕಷ್ಟು ನಿದ್ರೆ ಪಡೆಯುವುದು, ಸತು ಮತ್ತು ಮೆಗ್ನೀಸಿಯಮ್ ಪೂರಕ ಆಹಾರ ತೆಗೆದುಕೊಳ್ಳುವುದು, ಶುದ್ಧ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೆ, ಜಿಮ್‌ಗಾಗಿ ಕಡಿಮೆ ಸಮಯ ಮೀಸಲಿರಿಸಿ. ಅಲ್ಲದೆ ದೇಹದಲ್ಲಿ ಹೊಸ ವೀರ್ಯ ಸೃಷ್ಟಿಯಾಗಲು ಸುಮಾರು ಮೂರು ತಿಂಗಳು ಬೇಕಾಗುತ್ತದೆ. ಹಾಗಾಗಿ ಈ ಮಧ್ಯೆ ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಈ ಬದಲಾವಣೆಗಳು ಉತ್ತಮ ಫಲಿತಾಂಶ ನೀಡುತ್ತವೆ ಎನ್ನಲಾಗಿದೆ.

Advertisement