ಸೋಮವಾರ, 26 ಅಕ್ಟೋಬರ್ 2026
Trending

ಲೋಕಲ್ ಮುಸ್ಲಿಮರ ಮೇಲೆಯೇ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನ್ ನ ವಾಪಸಾತಿಗೆ ಸಂಭ್ರಮಾಚರಿಸಿದ ಭಾರತದ ಕೆಲ ಮುಸ್ಲಿಮರು | ಹಿರಿಯ ನಟ ನಾಸಿರುದ್ದೀನ್ ಶಾ ಕಟು ಟೀಕೆ

ಅಫ್ಘಾನಿಸ್ತಾನ ಈಗಾಗಲೇ ತಾಲಿಬಾನ್ ರಕ್ಕಸರ ವಶವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತದಲ್ಲೂ ಕೆಲವೊಂದು ರೀತಿಯ ಪರಿಣಾಮ ಉಂಟುಮಾಡಿದೆ. ಭಾರತದಲ್ಲಿನ ಕೆಲವು ಸೋ ಕಾಲ್ಡ್ ‘ವಿದೇಶಭಕ್ತರು’ ಇದರ ಸಂಭ್ರಮಾಚರಣೆ ಮಾಡಿದ್ದಾರೆ. ಇಂತಹವರಿಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಚಾಟಿ ಬೀಸಿದ್ದಾರೆ.

Sponsored

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಮರನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಕಟುವಾಗಿ ಟೀಕಿಸಿದ್ದಾರೆ.

Advertisement

ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮುಸ್ಲಿಮರನ್ನು ಟೀಕಿಸಿರುವ ಅವರ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮರಳಿ ಅಧಿಕಾರಕ್ಕೆ ಬಂದಿರುವುದು ಇಡೀ ವಿಶ್ವಕ್ಕೆ ಕಳವಳಕಾರಿಯಾಗಿದ್ದರೂ ಸಹ, ಭಾರತದ ಕೆಲವು ಮುಸ್ಲಿಮರು ಸಂಭ್ರಮಿಸುತ್ತಿದ್ದಾರೆ. ಅನಾಗರಿಕರನ್ನು ಓಲೈಸುವ ಆಚರಣೆಗಳು ಕಡಿಮೆ ಅಪಾಯಕಾರಿಯಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ತಮ್ಮ ಧರ್ಮದಲ್ಲಿ ಆಧುನಿಕತೆ ಮತ್ತು ಸುಧಾರಣೆಗಳನ್ನು ಬಯಸುತ್ತಾರೆಯೇ ಅಥವಾ ಅವರು ಹಳೆಯ ಅನಾಗರಿಕ ಮೌಲ್ಯಗಳಿಗೆ ಮರಳಲು ಬಯಸುತ್ತಾರೆಯೇ? ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಮಿರ್ಜಾ ಗಾಲಿಬ್ ಬಹಳ ಹಿಂದೆಯೇ ಹೇಳಿದಂತೆ, ನನ್ನ ದೇವರೊಂದಿಗಿನ ನನ್ನ ಸಂಬಂಧವು ಸಾಟಿಯಿಲ್ಲ. ನನಗೆ ರಾಜಕೀಯ ಧರ್ಮದ ಅಗತ್ಯವಿಲ್ಲ.

ಹಿಂದುಸ್ತಾನಿ ಇಸ್ಲಾಂ, ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದ್ದು ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆಯಲ್ಲಿದೆ ಮತ್ತು ನಾವು ಅದನ್ನು ಗುರುತಿಸಲು ಸಾಧ್ಯವಾಗದ ಸಮಯ ಬರದಂತೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂಬ ಚಿಂತನೆಯನ್ನು ನಾಸಿರುದ್ದೀನ್ ಶಾ ಹಂಚಿಕೊಂಡಿದ್ದಾರೆ.