ಶನಿವಾರ, 24 ಅಕ್ಟೋಬರ್ 2026

ಕೇರಳ ಚುನಾವಣೆ: ಕೋಝಿಕ್ಕೋಡ್‌ ವಲಯದ ಬಿಜೆಪಿ ಚುನಾವಣಾ ಪ್ರಭಾರಿಯಾಗಿ ಸಂಜೀವ ಮಠಂದೂರು ನೇಮಕ

Puttur Election

ಬೆಂಗಳೂರು: ಕೇರಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಿರಿಯ ನಾಯಕ ಸಂಜೀವ ಮಠಂದೂರು ಅವರನ್ನು ಕೋಝಿಕ್ಕೋಡ್‌ ವಲಯದ ಚುನಾವಣಾ ಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಮೇರೆಗೆ, ರಾಜ್ಯ ಬಿಜೆಪಿ ಅಧ್ಯಕ್ಷರು ಸಂಜೀವ ಮಠಂದೂರು ಅವರಿಗೆ ಈ ಜವಾಬ್ದಾರಿಯನ್ನು ವಹಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.