ಭಾನುವಾರ, 25 ಅಕ್ಟೋಬರ್ 2026

Airtel ಜೊತೆ ಜಿದ್ದಾಜಿದ್ದಿ ನಡೆಸಲು ಜಿಯೋ ತಂದಿದೆ 336 ದಿನಗಳ ಸೂಪರ್‌ ಪ್ಲ್ಯಾನ್‌! ಇದರ ಬೆಲೆ ಹಾಗೂ ಪ್ರಯೋಜನದ ಕಂಪ್ಲೀಟ್‌ ವಿವರ ಇಲ್ಲಿದೆ

Jio 895 Plan: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗುತ್ತಿದೆ.

Jio 895 Plan

Jio 895 Plan: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

Sponsored

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಹಲವು ಉತ್ತಮ ಪ್ರಿಪೇಯ್ಡ್ ಯೋಜನೆ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಪ್ರಯೋಜನದ ವಿಷಯದಲ್ಲಿ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಕೂಡ ಉತ್ತಮವಾಗಿವೆ.

Marriage AdMarriage AdSponsored

ಜಿಯೋ ಹೊಸ ಯೋಜನೆಗಳ ಮೂಲಕ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡಬಲ್ಲ ಆಫರ್ ಗಳನ್ನೂ ಪರಿಚಯಿಸುತ್ತಿದೆ. ರಿಲಯನ್ಸ್ ಜಿಯೋ (Reliance Jio) ಪರಿಚಯಿಸಿರುವ ಬೆಸ್ಟ್ ಆಂಡ್ ಚೀಪೇಸ್ಟ್ ಯೋಜನೆಗಳು ಯಾವುವು ಎಂಬ ಮಾಹಿತಿ ನಿಮಗಾಗಿ.

ಜಿಯೋ 222 ರೀಚಾರ್ಜ್ ಯೋಜನೆ:
ಜಿಯೋ 222 ರೀಚಾರ್ಜ್ ಯೋಜನೆ ಮೂಲಕ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆಯಬಹುದಾಗಿದೆ. ಇದಲ್ಲದೆ, ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 SMS ಪ್ರಯೋಜನ ನಿಮಗೆ ಲಭ್ಯವಾಗಲಿದೆ. ಈ ಯೋಜನೆ 28 ದಿನಗಳ ಮಾನ್ಯತೆ ಹೊಂದಿದ್ದು ಇದರಲ್ಲಿ 56GB ಡೇಟಾವನ್ನು ನೀಡಲಾಗಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಭದ್ರತೆಯ ಚಂದಾದಾರಿಕೆಯನ್ನು ಪಡೆಯಬಹುದು.ನೀವು ಇದನ್ನು Paytm, Phonepe ನಿಂದಲೂ ಖರೀದಿ ಮಾಡಬಹುದು. ಕೈಗೆ ಎಟಕುವ ದರದಲ್ಲಿ ಹೆಚ್ಚಿನ ಪ್ರಯೋಜನ ಪಡೆಯಲು ಈ ಯೋಜನೆ ಸಹಕಾರಿ.

ಜಿಯೋ 152 ರೀಚಾರ್ಜ್ ಯೋಜನೆ:
ಜಿಯೋ 152 ರೀಚಾರ್ಜ್ ಯೋಜನೆ ಮೂಲಕ ಅನಿಯಮಿತ ಕರೆ ಜೊತೆಗೆ 14GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆ 28 ದಿನಗಳವರೆಗೆ ಲಭ್ಯವಿದ್ದು, 300 ಎಸ್ಎಂಎಸ್ ಸೌಲಭ್ಯ ಕೂಡ ಪಡೆಯಬಹುದಾಗಿದೆ. ಈ ಯೋಜನೆಯು ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯಲು ಇಚ್ಚಿಸುವವರಿಗೆ ಉತ್ತಮ ಯೋಜನೆಯಾಗಿದೆ.

ಜಿಯೋ 895 ರೀಚಾರ್ಜ್ ಯೋಜನೆ:(Jio 895 Plan)
ಜಿಯೋ 895 ರೀಚಾರ್ಜ್ ಯೋಜನೆ ಮೂಲಕ 2GB ಡೇಟಾವನ್ನು 28 ದಿನಗಳವರೆಗೆ ಪಡೆಯಬಹುದು.ಈ ಯೋಜನೆಯಲ್ಲಿ 24GB ಡೇಟಾವನ್ನು ನೀಡಲಾಗಿದೆ. ಈ ಮಾನ್ಯತೆಯು 336 ದಿನಗಳವರೆಗೆ ದೊರೆಯಲಿದ್ದು, ಇದರಲ್ಲಿ ನೀವು ತಲಾ 28 ದಿನಗಳ 12 ಸೈಕಲ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.28 ದಿನಗಳವರೆಗೆ ಅನಿಯಮಿತ ಕರೆ ಹಾಗೂ 50 ಎಸ್ಎಂಎಸ್ ಸೌಲಭ್ಯ ಪಡೆಯಬಹುದಾಗಿದೆ. ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ಈ ಮೇಲೆ ತಿಳಿಸಿದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.