ಅಂತಾರಾಷ್ಟ್ರೀಯ ಆಪಲ್ ಸಂಸ್ಥೆಯ ಐಫೋನ್ ವಿರುದ್ಧ ‘ಐಫೋನ್ ಜಿಹಾದ್’ ಎಂಬ ಹೊಸ ಆರೋಪ ಕೇಳಿಬಂದಿದ್ದು, ಐಫೋನ್ನ ವಾಯ್ಸ್ ಅಸಿಸ್ಟೆಂಟ್ ಫೀಚರ್ ಆದ ‘ಸಿರಿ’ (Siri) ಮುಸ್ಲಿಮರ ಧಾರ್ಮಿಕ ವಂದನೆಗೆ ಮಾತ್ರ ಪ್ರತಿಕ್ರಿಯಿಸುತ್ತದೆ, ಹಿಂದೂಗಳ ಘೋಷಣೆಗಳಿಗೆ ಮೌನ ವಹಿಸುತ್ತದೆ ಎನ್ನಲಾಗಿದ್ದು ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀರಾಮನ ಭಕ್ತನೊಬ್ಬ ವಿಡಿಯೋ ಮಾಡಿ ಗಂಭೀರ ಆರೋಪ ಮಾಡಿದ್ದು, ವಿಡಿಯೋದಲ್ಲಿ ಅವರು ಐಫೋನ್ ಕೈಯಲ್ಲಿ ಹಿಡಿದು ‘ಸಿರಿ’ ಆಪ್ಷನ್ ಅನ್ನು ಆನ್ ಮಾಡಿ ಪ್ರಶ್ನೆಗಳನ್ನು ಕೇಳಿದ್ದಾರೆ. ಸಿರಿಗೆ ಮುಸ್ಲಿಮರ ಧಾರ್ಮಿಕ ವಂದನೆಯಾದ ‘ಅಸ್ಸಲಾಮ್ ಅಲೈಕುಂ’ ಎಂದು ಹೇಳಿದಾಗ, ಅದು ತಕ್ಷಣವೇ ‘ವ ಅಲೈಕುಮುಸ್ಸಲಾಂ’ ಎಂದು ಮರುಪ್ರತಿಕ್ರಿಯೆ ನೀಡುತ್ತದೆ. ಆದರೆ, ಅದೇ ಸಿರಿಗೆ ‘ಜೈ ಶ್ರೀರಾಮ್'(Jai Shri Ram) ಅಥವಾ ‘ಜೈ ಮಹಾಕಾಲ್’ ಎಂದು ಹೇಳಿದಾಗ ಅದು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂಬುದನ್ನು ವಿಡಿಯೋದಲ್ಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.
“ಐಫೋನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ಯಾರೂ ಸಹ ಇನ್ಮುಂದೆ ಐಫೋನ್ ಬಳಸಬೇಡಿ,” ಎಂದು ಈ ವ್ಯಕ್ತಿ ಸಾರ್ವಜನಿಕರಿಗೆ ಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, “ದೇಶದ ಕೋಟ್ಯಂತರ ಹಿಂದೂಗಳು ಮುಗಿಬಿದ್ದು ಐಫೋನ್ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ನಿಮ್ಮ ವೈಯಕ್ತಿಕ ಡೇಟಾಗಳನ್ನು ನೀವೇ ಸ್ವತಃ ವಿದೇಶಿ ಕಂಪನಿಗೆ ಒಪ್ಪಿಸುತ್ತಿದ್ದೀರ,” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ನೆಟ್ಟಿಗರು ಈ ಬಗ್ಗೆ ಪರ-ವಿರೋಧದ ಚರ್ಚೆಗಳನ್ನು ಆರಂಭಿಸಿದ್ದಾರೆ.
ವಿಡಿಯೋ 👇



