ಹೈದರಾಬಾದ್‌ನಲ್ಲಿ ಆಹಾರ ಕಲಬೆರಕೆ ಜಾಲಗಳನ್ನು ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ. ನಗರದ ಪ್ರಮುಖ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ಬೆಲೆಯ ಹೆಸರಿನಲ್ಲಿ ಕಲಬೆರಕೆ ಮಾಂಸ, ಕೊಳೆತ ಮೀನು ಹಾಗೂ ಸಿಗಡಿಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಹಬೀಬ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಪಲ್ಲಿಯಲ್ಲಿ ಅಕ್ರಮ ವ್ಯಾಪಾರ ನಡೆಸುತ್ತಿದ್ದ ಮೊಹಮ್ಮದ್ ಉಸ್ಮಾನ್ ಖುರೇಶಿ ಎನ್ನುವಾತನನ್ನು ಅಧಿಕಾರಿಗಳು ಬಂಧನ ಮಾಡಿದ್ದಾರೆ. ಈತ ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸವನ್ನು ಬೆರೆಸಿ ನಗರದ ಹಲವು ದೊಡ್ಡ ಹೋಟೆಲ್‌ಗಳಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೂರೈಕೆ ಮಾಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಸುಮಾರು 50ಕೆಜಿ ಕಲಬೆರಕೆ ಮಾಂಸವನ್ನು ವಶಪಡಿಸಲಾಗಿದೆ. ವಶಪಡಿಸಲಾದ ಮಾಂಸದ ಮಾದರಿಗಳನ್ನು ಪರೀಕ್ಷೆಗೆ ನಾಚಾರಂನ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬೀಗಂಬಜಾರ್ ಮಾರುಕಟ್ಟೆಯಿಂದ ಕಡಿಮೆ ಬೆಲೆಗೆ ಕೊಳೆತ ಮೀನು ಮತ್ತು ಸಿಗಡಿಗಳನ್ನು ಖರೀದಿಸಿ, ಅವುಗಳಿಂದ ದುರ್ವಾಸನೆ ಬರದಂತೆ ಹಾಗೂ ತಾಜಾ ಇರುವಂತೆ ಕಾಣಿಸಲು ಸೋಡಿಯಂ ಬೈಕಾರ್ಬೋನೇಟ್ ಪುಡಿಯನ್ನು ಬಳಸಿ ಹೋಟೆಲ್‌ಗಳು ಮತ್ತು ಕ್ಯಾಟರಿಂಗ್ ಸೇವೆಗಳಿಗೆ ಪೂರೈಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಅಂಗಡಿ ನಿರ್ವಾಹಕರಾದ ಶಂಕರ್ ಸಿಂಗ್ (24), ಮಾನ್ ಸಿಂಗ್ (32), ಗುಲಾಬ್ ಸಿಂಗ್ (36) ಹಾಗೂ ರೋಹಿತ್ ಸಿಂಗ್ (31) ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.
Biriyani lovers should be careful…
Two Detained for Mixing #Beef with #Mutton & Supplying It to Hotels in #Hyderabad.
Two persons Mohad Osman & Mohd Jahangir were detained after officials uncovered a racket involving the mixing of beef with mutton for supply to hotels in… pic.twitter.com/V6LFv4MVLu
— Sowmith Yakkati (@YakkatiSowmith) July 1, 2026



