ಭಾನುವಾರ, 25 ಅಕ್ಟೋಬರ್ 2026
Trending

7 ವರ್ಷ ಪ್ರೀತಿಸಿ ಮಂಗಳಮುಖಿಯನ್ನ ಮದುವೆಯಾದ ಐಟಿ ಉದ್ಯೋಗಿ!!

ಐಟಿ ಉದ್ಯೋಗಿಯೊಬ್ಬ ಟ್ರಾನ್ಸ್‌ಜೆಂಡರ್‌ ಅನ್ನು  ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವ ಘಟನೆ ಈರೋಡ್‌ನ ಗೋಬೊಚೆಟ್ಟಿಪಾಳ್ಯಂನಲ್ಲಿ ವರದಿಯಾಗಿದೆ. 

Sponsored

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡ್‌ನ ಟ್ರಾನ್ಸ್‌ಜೆಂಡರ್ ನಟಿ ಕಯಲ್ವಿಳಿ ಮತ್ತು ತಿರುವಳ್ಳೂರು ಜಿಲ್ಲೆಯ ಅವಡಿ ತಾಲೂಕಿನ ಮೊರೈ ಗ್ರಾಮದ ಐಟಿ ವೃತ್ತಿಪರ ಪ್ರವೀಣ್ ರಾಜ್ ಅವರು ಸುಮಾರು ಏಳು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು ಎರಡು ವರ್ಷಗಳ ಬಳಿಕ ಪ್ರೀತಿಯಾಗಿ ಬದಲಾಯಿತು. ಸಧ್ಯ ಈ ಜೋಡಿ, ಕುಟುಂಬದವರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಯಲ್ವಿಳಿ ಅವರು ‘ತೋಟ್ರಮ್’, ‘ರಾವಣ ರಾಮನ್’ ಮತ್ತು ‘ಕಂಧನ್ ಮಲೈ’ ಸೇರಿದಂತೆ ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ‘ಟಾಕ್ಸಿಕ್’ ಹಾಗೂ ‘ಪಾರ್ಟಿ’ ಎಂಬ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರಿಂದ ತೀವ್ರ ವಿರೋಧ ಹಾಗೂ ಕಿರುಕುಳವನ್ನು ಎದುರಿಸಿ ತಾವು ಮದುವೆಯಾಗಬೇಕಾಯಿತು ಎಂದು ದಂಪತಿಗಳು ತಿಳಿಸಿದ್ದಾರೆ.