ಸೋಮವಾರ, 26 ಅಕ್ಟೋಬರ್ 2026
Trending

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್‌ ಮಾಡಿ!

Voter ID Correction

ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Sponsored

ಎಸ್‌ಐಆರ್‌ ಪ್ರಕ್ರಿಯೆಯ ಬಳಿಕ ವೆಬ್‌ಸೈಟ್‌ನ್ನು ಚುನಾವಣಾ ಆಯೋಗ ರೂಪಿಸಿದೆ. ಈ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಎಪಿಕ್‌ ನಂಬರ್‌ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಸೈಟ್‌ನಲ್ಲಿ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದರೆ ಫಾರ್ಮ್‌ 6 ಮತದಾರರು ಸಲ್ಲಿಸಿ ಹೆಸರನ್ನು ಸೇರಿಸಬಹುದು.

Advertisement

ASDDO ಪಟ್ಟಿಯಲ್ಲಿ ಹುಡುಕೋದು ಹೇಗೆ?
ಮೊದಲಿಗೆ ನೀವು https://karnataka-asddo-lookup.vercel.app/ ವೆಬ್‌ಸೈಟಿಗೆ ಹೋಗಬೇಕು
ಇಲ್ಲಿ ನಿಮ್ಮ ಎಪಿಕ್‌ ನಂಬರ್‌(ವೋಟರ್‌ ಐಡಿ) ನಂಬರ್‌ ಎಂಟ್ರಿ ಮಾಡಬೇಕು
ಎಂಟ್ರಿ ಮಾಡಿದಾಗ ಈ ಗುರುತಿನ ಚೀಟಿ ತೆಗೆದುಹಾಕಿದ ಪಟ್ಟಿಯಲ್ಲಿ ಇಲ್ಲ ಎಂಬ ಸಂದೇಶ ಬಂದರೆ ನಿಮ್ಮ ಹೆಸರು ಡಿಲೀಟ್‌ ಆಗಿಲ್ಲ ಎನ್ನುವುದು ತೋರಿಸುತ್ತದೆ.

ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು voters.eci.gov.in ನೋಡಿ ಅಥವಾ ನಿಮ್ಮ BLO ಅವರನ್ನು ವಿಚಾರಿಸಬಹುದು.

ವೋಟರ್‌ ಐಡಿ ಸಂಖ್ಯೆಯನ್ನು ಹಾಕಿದಾಗ ಈ ಎಪಿಕ್‌ ಸಂಖ್ಯೆ ಎಸ್‌ಡಿಡಿಒ ಪಟ್ಟಿಯಲ್ಲಿದ್ದರೆ ನೀವು ನಿಮ್ಮ ಮತಗಟ್ಟೆ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿಗೆ ಕರೆ ಮಾಡಿ ತಮ್ಮ ಗಣತಿ ನಮೂನೆಯನ್ನು ರೋಲ್‌ ಬ್ಯಾಕ್‌ ಮಾಡಲು ಮನವಿ ಸಲ್ಲಿಕೆ ಮಾಡಬೇಕು ಅಥವಾ 1950 ವೋಟರ್‌ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಂಪರ್ಕ ಮಾಡಬಹುದು.

voters.eci.gov.in ವೆಬ್‌ಸೈಟ್‌ಗೆ ಹೋಗಿ, ಇಲ್ಲಿ ನಿಮಗೆ ಮೂರು ಆಯ್ಕೆಗಳು ಇರುತ್ತದೆ. ಒಂದನೇಯದ್ದು ವೋಟರ್‌ ಐಡಿ ನಂಬರ್‌ ಮೂಲಕ ಹುಡುಕುವುದು. ಒಂದು ವೇಳೆ ಎಪಿಕ್‌ ನಂಬರ್‌ ಕಳೆದು ಹೋಗಿದ್ದರೂ ನೀವು ನಿಮ್ಮ ಹೆಸರನ್ನು ಹುಡುಕಬಹುದು.

ಇಲ್ಲಿ ನೀವು ವಿವರಗಳು ಆಯ್ಕೆ ಮಾಡಿ ರಾಜ್ಯ, ಹೆಸರು, ಭಾಷೆ, ಹೆಸರು, ಹುಟ್ಟಿದ ದಿನಾಂಕ, ಸಂಬಂಧಿಯ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸುವ ಮೂಲಕ ಹುಡುಕಬಹುದು.

ಮೂರನೇಯದ್ದು ಮೊಬೈಲ್‌ ನಂಬರ್‌ ಮೂಲಕವು ಸರ್ಚ್‌ ಮಾಡಬಹುದು. ಆದರೆ ವೋಟರ್‌ ಐಡಿಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿದ್ದರೆ ಇಲ್ಲಿ ಸರ್ಚ್‌ ಆಗುತ್ತದೆ.