ಸೋಮವಾರ, 26 ಅಕ್ಟೋಬರ್ 2026
Trending

ಈ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಕೇವಲ 2 ರೂಪಾಯಿ

ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತದೆ. ಈಗಂತೂ ಪೆಟ್ರೋಲ್ ದರ ನೂರರ ಗಡಿ ದಾಟಿ 150ರ ಗಡಿಯನ್ನು ಸಮೀಪಿಸುತ್ತಿದೆ. ಆದರೆ ಇದೊಂದು ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ ಎರಡು ರೂಪಾಯಿ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು ಹಾಗಿದ್ರೆ ಯಾವ ದೇಶವದು?

Sponsored

ವೆನೆಜುವೆಲಾ, ಇರಾನ್, ಲಿಬಿಯಾದಂತಹ ದೇಶಗಳಲ್ಲಿ ಪೆಟ್ರೋಲ್ ಬೆಲೆ ನೀರಿಗಿಂತಲೂ ಕಡಿಮೆಯಿದೆ. ಹೌದು, ಅಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹2 ರಿಂದ ₹3 ರೂಪಾಯಿಗೆ ಸಿಗುತ್ತಿದೆ! ಇಲ್ಲಿ ಪೆಟ್ರೋಲ್ ಬೆಲೆ ಒಂದು ಬಾಟಲಿ ನೀರಿನ ಬೆಲೆಗಿಂತ ಕಡಿಮೆ. ಈ ದೇಶಗಳಲ್ಲಿ ಯಾಕಿಷ್ಟು ಕಡಿಮೆ? ಎಂಬ ಪ್ರಶ್ನೆ ಬರುತ್ತದಲ್ಲವ? ಇದಕ್ಕೆ ಕಾರಣ ಭಾರೀ ಸರ್ಕಾರಿ ಸಬ್ಸಿಡಿಗಳು. ಸರ್ಕಾರಗಳು ತಮ್ಮ ನಾಗರಿಕರಿಗೆ ಕೈಗೆಟುಕುವ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಾಗುವಂತೆ ನೋಡಿಕೊಳ್ಳುವುದರಿಂದಾಗಿ ಭಾರತಕ್ಕಿಂತಲೂ ಇಲ್ಲಿ ಪೆಟ್ರೋಲ್ ಬೆಲೆಗಳು 32 ರಿಂದ 48 ಪಟ್ಟು ಕಡಿಮೆ ಇರುತ್ತದೆ.

ಯಾವ ದೇಶದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ?

ಹಾಂಗ್ ಕಾಂಗ್, ಮೊನಾಕೊ ಮತ್ತು ಐಸ್ಲ್ಯಾಂಡ್, ಡೆನ್ಮಾರ್ಕ್ ಮತ್ತು ನಾರ್ವೆಯಂತಹ ಯುರೋಪಿಯನ್ ದೇಶಗಳಲ್ಲಿ ಪೆಟ್ರೋಲ್ ಬೆಲೆಗಳು ಅತ್ಯಂತ ದುಬಾರಿಯಾಗಿವೆ. ಸೆಪ್ಟೆಂಬರ್ 2026 ರ ಬೆಲೆಯಂತೆ ಹೇಳುವುದಾದರೆ, ಹಾಂಗ್ ಕಾಂಗ್‌ನಲ್ಲಿ ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್‌ಗೆ ₹420 ರಿಂದ ₹425 ರವರೆಗೆ ಇದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು. ಸರ್ಕಾರವು ಪೆಟ್ರೋಲ್ ಮೇಲೆ ಭಾರೀ ತೆರಿಗೆ ವಿಧಿಸುವುದರಿಂದ ಹಾಂಗ್ ಕಾಂಗ್‌ನಲ್ಲಿ ಇಂಧನ ಬೆಲೆಗಳು ಹೆಚ್ಚಾಗಲು ಕಾರಣವಾಗಿದೆ.