IISER IAT ಪರೀಕ್ಷೆ: ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿಗೆ ಅಭೂತಪೂರ್ವ ಯಶಸ್ಸು
ಗುರುವಾಯನಕೆರೆ: ದೇಶದ ಅತ್ಯುನ್ನತ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರ ಮಟ್ಟದ ‘ಐಐಎಸ್ಇಆರ್ ಆಪ್ಟಿಟ್ಯೂಡ್ ಟೆಸ್ಟ್’ (IISER IAT 2026) ಪರೀಕ್ಷೆಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳಾದ ಯಶಸ್ ಗೌಡ ಎನ್ -ರ‍್ಯಾಂಕ್ 312 ಹಾಗೂ ಪಂಚಮಿ ಪಿ ಎನ್ -ರ‍್ಯಾಂಕ್ 430 ಅತ್ಯುನ್ನತ ಸಾಧನೆ ಮಾಡಿದ್ದು, ಉಳಿದಂತೆ ಹಲವು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ರ‍್ಯಾಂಕ್‌ಗಳನ್ನು ಗಿಟ್ಟಿಸಿಕೊಂಡಿದ್ದಾರೆ.ಸಾಧಕ ವಿದ್ಯಾರ್ಥಿಗಳ ವಿವರ:
Sponsoredಯಶಸ್ ಗೌಡ ಎನ್ – ರ‍್ಯಾಂಕ್: 31 2
ಪಂಚಮಿ ಪಿ ಎನ್ – ರ‍್ಯಾಂಕ್: 430
ನಿಶ್ಚಿತ – ರ‍್ಯಾಂಕ್: 505
ರಾಹುಲ್ ಬಿ – ರ‍್ಯಾಂಕ್: 677
ವಿದ್ಯಾಧರ್ ಬಿ ಆರ್ – ರ‍್ಯಾಂಕ್: 698
ಶಿಲ್ಪಿತಾ ಹೆಚ್ ಎಸ್ – ರ‍್ಯಾಂಕ್: 1088
ತಜ್ಞ ಟಿ ಎಸ್ – ರ‍್ಯಾಂಕ್: 2688
ಧೃತಿ ಎಂ – ರ‍್ಯಾಂಕ್: 3329
ವಿದ್ಯಾರ್ಥಿಗಳ ಈ ಅತ್ಯುತ್ತಮ ಶೈಕ್ಷಣಿಕ ಸಾಧನೆಗೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಶಎಲ್ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಗುಣಮಟ್ಟದ ಶಿಕ್ಷಣ, ನಿರಂತರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮವೇ ಈ ಯಶಸ್ಸಿಗೆ ಕಾರಣ ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ಶ್ಲಾಘಿಸಿದ್ದಾರೆ. ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಉನ್ನತ ಸಂಶೋಧನಾ ಹಾದಿಗೆ ಕಾಲೇಜಿನ ಪರವಾಗಿ ಶುಭ ಹಾರೈಸಲಾಗಿದೆ.




