Home » ಒಂದು ಹೆಣ್ಣಾನೆ ಇದ್ರೆ ಪ್ಲೀಸ್ ಕೊಡಿ – ಕೇರಳ ಸಿಎಂ ಗೆ ಲೆಟರ್ ಬರೆದ ಕರ್ನಾಟಕ ಸಿಎಂ

ಒಂದು ಹೆಣ್ಣಾನೆ ಇದ್ರೆ ಪ್ಲೀಸ್ ಕೊಡಿ – ಕೇರಳ ಸಿಎಂ ಗೆ ಲೆಟರ್ ಬರೆದ ಕರ್ನಾಟಕ ಸಿಎಂ

0 comments

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದ್ದಾರೆ.

ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ದೇವಸ್ಥಾನದ ಆಚರಣೆಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಹೀಗಾಗಿ ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.

ಅಲ್ಲದೆ ಚಾಲ್ತಿಯಲ್ಲಿರುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿಯೇ ಈ ಆನೆ ದಾನದ ಪ್ರಕ್ರಿಯೆಗೆ ನೆರವಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿನಂತಿಸಿದ್ದಾರೆ. ಕೇರಳ ಸರ್ಕಾರದ ಈ ತ ನಡೆ ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಆದರೆ ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ದೇವಸ್ಥಾನಗಳಿಂದ ದಾನಿಗಳನ್ನು ಹುಡುಕುವುದು ಅಥವಾ ಆನೆ ದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಅರಣ್ಯ ಇಲಾಖೆಯ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮೌಲ್ಯೀಕರಿಸುವುದು ಮತ್ತು ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಇಲಾಖೆಯ ಕೆಲಸ ಎಂದು ಅವರು ತಿಳಿಸಿದ್ದಾರೆ.

You may also like