ಬಹಳ ದಿನಗಳ ನಂತರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಶುಕ್ರವಾರ ಮಧ್ಯಾಹ್ನ 3:10ರ ವೇಳೆಗೆ ಚಿನ್ನದ (Gold) ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸುಮಾರು 1,61,196 ರೂ.ನಷ್ಟಕ್ಕೆ ತಲುಪಿದೆ. ಅಂದರೆ 1,771 ರೂ. ಏರಿಕೆ ಕಂಡುಬಂದಿದೆ.
ಇದೇ ವೇಳೆ ಬೆಳ್ಳಿ ಕೂಡ ಏರಿಕೆ ಕಂಡಿದ್ದು, ಕೆಜಿಗೆ ಸುಮಾರು 2,46,371 ರೂ.ಕ್ಕೆ ವಹಿವಾಟು ನಡೆದಿದೆ. ಹಿಂದಿನ ಬೆಲೆಗೆ ಹೋಲಿಸಿದ್ರೆ 3,128 ರೂ. ಅಥವಾ 1.29% ಏರಿಕೆ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ಮೂಲಕ ಸತತ 3ನೇ ವಾರವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.



