ಸೋಮವಾರ, 26 ಅಕ್ಟೋಬರ್ 2026
Trending

ಗುರುವಾಯನಕೆರೆ: ನಿವೃತ್ತ ಅಂಚೆ ಅಧಿಕಾರಿ ರಾಮಚಂದ್ರ ಹೃದಯಾಘಾತದಿಂದ ನಿಧನ : ಇಂದು ಬೆಳಗ್ಗೆ ಅಂತ್ಯಕ್ರಿಯೆ

ಬೆಳ್ತಂಗಡಿ: ಗುರುವಾಯನಕೆರೆಯ ನಿವೃತ್ತ ಅಂಚೆ ಇಲಾಖೆ ಅಧಿಕಾರಿ ರಾಮಚಂದ್ರ ಕಂಚಿಜೆ (65) ಅವರು ಹೃದಯಾಘಾತದಿಂದ ಜು.29 ರಂದು ಸಂಜೆ ನಿಧನರಾಗಿದ್ದಾರೆ.

Sponsored

ಬೆಳ್ತಂಗಡಿ ತಾಲೂಕಿನಲ್ಲಿ ಚಿರ ಪರಿಚಿತರಾಗಿದ್ದ ಅವರು ಅಂಚೆ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಹೋಟೆಲ್ ಉದ್ಯೋಗ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

Advertisement

ಅವರು ಕಂಚಿಜೆ ಅಣ್ಣಪ್ಪ ಪಂಜುರ್ಲಿ ದೈವದ ಪ್ರಮುಖ ಆರಾಧಕರಾಗಿದ್ದರು. ಪತ್ನಿ ಭಾರತಿ ಪುತ್ರ ರಂಜಿತ್,ಪುತ್ರಿ ಚೇತನ ಅಗಲಿದ್ದಾರೆ ಅಂತ್ಯಕ್ರಿಯೆಯು ಇಂದು ಜು.30 ರಂದು ಬೆಳಗ್ಗೆ 10 ಗಂಟೆಗೆ ಗುರುವಾಯನಕೆರೆಯ ಸ್ವಗೃಹದಲ್ಲಿ ನಡೆಯಲಿದೆ.ರಾಮಚಂದ್ರ ಕಂಚಿಜೆ ಅವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.