ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ದ್ವಿತೀಯ ಪಿ.ಯು ನಲ್ಲಿ ಸತತ ಎರಡನೇ ಬಾರಿಗೆ 100% ಫಲಿತಾಂಶ 15 ಮಂದಿಗೆ ಡಿಸ್ಟಿಂಕ್ಷನ್
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ದ್ವಿತೀಯ ಪಿ.ಯು ನಲ್ಲಿ ಶೇ100 ಫಲಿತಾಂಶ ದಾಖಲಿಸಿದೆ.
Sponsoredಪದವಿ ಪೂರ್ವ ದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 50 ಮಂದಿ ತೇರ್ಗಡೆ ಆಗಿ ಶೇ100 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 25 ವಿದ್ಯಾರ್ಥಿಗಳು ತೇರ್ಗಡೆ ಯಾಗಿ ಶೇ100 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 25 ವಿದ್ಯಾರ್ಥಿಗಳು ತೇರ್ಗಡೆ ಯಾಗಿ ಶೇ100 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 15 ಪ್ರಥಮ ಶ್ರೇಣಿಯಲ್ಲಿ ಕಲಾ ವಿಭಾಗದಲ್ಲಿ 5 ಮಂದಿ ವಿಶಿಷ್ಟ ಶ್ರೇಣಿಯಲ್ಲಿ 20 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಾಣಿಜ್ಯ ವಿಭಾಗದ, ಸಮೀಕ್ಷಾ.ಯಂ.ವಿ 569, ತೃಷಾ.ಡಿ.ಎಸ್ 569, ನವ್ಯಶ್ರೀ 558,, ಪ್ರೀತಿಕಾ ಯಂ 555, ಅಶ್ವಿನಿ ಕೆ.ಆರ್ 550 ಸಚಿನ್.ಪಿ.ಆರ್ 548, ವಿಷ್ಣುಪ್ರಸಾದ್.ಎಂ 548,ವರ್ಷಾ.ಕೆ.ಬಿ 545, ಪುರುಷೋತ್ತಮ.ಎ 544, ಡೀಶಾಕುಮಾರಿ.ಕೆ.ವಿ 532 ಕಲಾ ವಿಭಾಗದಲ್ಲಿ ಹಂಸಿಕಾ.ಬಿ.ಎಲ್ 562 ಪೂರ್ಣಿ 543, ದಿವ್ಯಾ 527, ಅಖಿಲಾ.ಕೆ 524, ಜನನಿ.ಬಿ.ಆರ್ 521 ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.




