ಬಿಳಿ ಟಿ-ಶರ್ಟ್ ಗೆ ಗುಡ್ ಬೈ – ಡ್ರೆಸ್ಕೋಡ್ ಬದಲಸಿದ ರಾಹುಲ್ ಗಾಂಧಿ!!
ಅದರಲ್ಲೂ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದಾ ಬಿಳಿ ಟಿಶರ್ಟ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದುದು ಸಾಮಾನ್ಯ. ಅದರಲ್ಲೂ ಅವರು ಹೆಚ್ಚಾಗಿ ಬಿಳಿ ಟಿ-ಶರ್ಟ್ ಧರಿಸುತ್ತಿದ್ದರು. ಇದೀಗ ರಾಹುಲ್ ಗಾಂಧಿಯವರು ಬಿಳಿ ಟಿ-ಶರ್ಟ್ ಗೆ ಬಾಯ್ ಬಾಯ್ ಹೇಳಿದ್ದಾರೆ.
Sponsoredಹೌದು, ರಾಹುಲ್ ಗಾಂಧಿ ಅವರು ಇದೀಗ ಬಿಳಿ ಉಡುಪಿಗೆ ವಿದಾಯ ಹೇಳಿ ತಮ್ಮದೇ ಆದ ಹೊಸ ಫ್ಯಾಷನ್ ಹಾದಿ ತುಳಿದಿದ್ದಾರೆ. ದೇಶದ ಯುವ ಜನಾಂಗ, ಮುಖ್ಯವಾಗಿ ‘ಜೆನ್ ಝೆಡ್’ (Gen Z) ಯುವಕರನ್ನು ಸೆಳೆಯುವ ಉದ್ದೇಶದಿಂದ ರಾಹುಲ್ ಗಾಂಧಿ ತಮ್ಮ ವಾರ್ಡ್ರೋಬ್ ಮತ್ತು ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ.
2022ರ ‘ಭಾರತ್ ಜೋಡೋ ಯಾತ್ರೆ’ಯ ಸಮಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ, ಬಿಳಿ ಬಣ್ಣದ ಟಿ-ಶರ್ಟ್ ಧರಿಸಿ ಗಮನ ಸೆಳೆದಿದ್ದರು. ಅವರ ಈ ಸ್ಪೋರ್ಟಿ ಲುಕ್ ದೇಶಾದ್ಯಂತ ಸದ್ದು ಮಾಡಿದ್ದಲ್ಲದೆ, ಇತರ ಕಾಂಗ್ರೆಸ್ ನಾಯಕರ ಮೇಲೆಯೂ ಪ್ರಭಾವ ಬೀರಿತ್ತು. ಯಾವಾಗಲೂ ಕುರ್ತಾ-ಪೈಜಾಮದಲ್ಲೇ ಕಾಣಿಸಿಕೊಳ್ಳುತ್ತಿದ್ದ ಹಲವು ಕಾಂಗ್ರೆಸ್ ನಾಯಕರು ರಾಹುಲ್ ಹಾದಿಯನ್ನೇ ಹಿಡಿದು ಟಿ-ಶರ್ಟ್ ಧರಿಸಲು ಪ್ರಾರಂಭಿಸಿದ್ದರು. ಆದರೆ, ಈಗ ಈ ಶೈಲಿ ಮತ್ತೊಂದು ಹೊಸ ಹಂತಕ್ಕೆ ತಲುಪಿದೆ. ಕೇವಲ ಬಿಳಿ ಟಿ-ಶರ್ಟ್ಗೆಷ್ಟೇ ಸೀಮಿತವಾಗದೆ, ಅವರು ಬಣ್ಣ ಬಣ್ಣದ ಟಿ-ಶರ್ಟ್ಗಳು ಹಾಗೂ ಶರ್ಟ್ಗಳನ್ನು ಧರಿಸಲು ಶುರು ಮಾಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಕೋಟಾದಲ್ಲಿ ನಡೆದ ಮೊದಲ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ನೀಲಿ ಬಣ್ಣದ ಶರ್ಟ್ ಧರಿಸಿ ಭಾಗವಹಿಸಿದ್ದರು. ಡೆಹ್ರಾಡೂನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ-ಶರ್ಟ್ ಬದಲಿಗೆ ಆಕರ್ಷಕ ಶರ್ಟ್ ತೊಟ್ಟಿದ್ದರು. ಅಷ್ಟೇ ಅಲ್ಲದೆ, ಅಲಹಾಬಾದ್ನಲ್ಲಿ ನಡೆದ ವಿದ್ಯಾರ್ಥಿಗಳ ಸಂವಾದದಲ್ಲಿ ಅವರು ರೋಪಿಂಗ್ ಮಾದರಿಯ ಪಿಂಕ್ (ಗುಲಾಬಿ) ಬಣ್ಣದ ಶರ್ಟ್ ಧರಿಸಿ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಂತರ ಪುಣೆಯಲ್ಲಿ ನಡೆದ ಸಮಾವೇಶದಲ್ಲಿ ಹಳದಿ ಬಣ್ಣದ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ.




