ಭಾನುವಾರ, 25 ಅಕ್ಟೋಬರ್ 2026
Trending

8 ತಿಂಗಳ ಬಳಿಕ ಬಾಲಕಿಯರು ಪತ್ತೆ ಕೇಸ್ – ಒಬ್ಬಳು ಗರ್ಭಿಣಿ, ಮತ್ತೊಬ್ಬಳು ಬೇರೊಬ್ಬನ ಜೊತೆ ಎಸ್ಕೇಪ್!!

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಜನವರಿ 31ರಂದು ನಾಪತ್ತೆಯಾಗಿದ್ದ ತನಿಷ್ಕಾ ಮತ್ತು ತೇಜಸ್ವಿನಿ ಎಂಬ ಪಿಯುಸಿ ವಿದ್ಯಾರ್ಥಿನಿಯರನ್ನು ಪತ್ತೆಹಚ್ಚುವಲ್ಲಿ ಕೊನೆಗೂ ಸಿಐಡಿ ಯಶಸ್ವಿಯಾಗಿದೆ. ಎಂಟು ತಿಂಗಳ ಬಳಿಕ ಯುವತಿಯರು ಪತ್ತೆಯಾಗಿದ್ದಾರೆ. ಹಾಗಿದ್ದರೆ ಇದುವರೆಗೂ ಅವರು ಎಲ್ಲಿದ್ದರೂ ಎಂಬ ಕಥೆಯನ್ನು ನೀವಂತು ಕೇಳಿದ್ರೆ ಇದು ಸಿನಿಮಾವನ್ನು ಮೀರಿಸುವಂತಿದೆ ಅನ್ನುತ್ತೀರಿ.

Sponsored

ತನಿಷ್ಕಾ ದ್ವಿತೀಯ ಪಿಯುಸಿ ಹಾಗೂ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಇಬ್ಬರೂ ಕಳೆದ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಹಲವು ತಿಂಗಳು ಕಳೆದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು ಹಲವು ಆಯಾಮಗಳಲ್ಲಿ ಹುಡುಕಾಟ ನಡೆಸಿದ್ದರು. ಈಗ ತನಿಷ್ಕಾ ಹೊಸ ಮೊಬೈಲ್ ಸಿಮ್ ಪಡೆಯಲು ಪ್ರಯತ್ನಿಸಿದ್ದಳು. ಆಧಾರ್‌ ಸಂಖ್ಯೆಯನ್ನು ಬಳಸಿದ ಮಾಹಿತಿ ಸಿಮ್ ಸೇವಾ ಸಂಸ್ಥೆಯ ಮೂಲಕ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಸುಳಿವು ಹಿಡಿದು ಮುಂದುವರಿದ ಅಧಿಕಾರಿಗಳು ಕೊನೆಗೂ  ತನಿಷ್ಕಾ ಇರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. 

ವಿಚಾರಣೆ ವೇಳೆ  ಮಲೆ ಮಹದೇಶ್ವರ ಬೆಟ್ಟದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಆತನ ಕುಟುಂಬದವರ ಸಂಪರ್ಕಕ್ಕೆ ಬಂದಿದ್ದ ಇಬ್ಬರೂ, ತಾವು ಸಹೋದರಿಯರು ಎಂದು ಹೇಳಿಕೊಂಡಿದ್ದರು. ಕುಟುಂಬದಲ್ಲಿ ತಂದೆ-ತಾಯಿ ಯಾರೂ ಇಲ್ಲ ಎಂಬುದಾಗಿಯೂ ತನಿಷ್ಕಾ ತಿಳಿಸಿದ್ದಳು ಎಂದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ. ಎಂಟು ತಿಂಗಳ ಬಳಿಕ ಇಬ್ಬರೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಯುವತಿಯರು ಈ ಅವಧಿಯಲ್ಲಿ ಎಲ್ಲಿದ್ದರು, ಅವರ ನಾಪತ್ತೆಯ ಹಿಂದಿನ ಸಂಪೂರ್ಣ ಹಿನ್ನೆಲೆ ಏನು ಎಂಬುದರ ಕುರಿತು ಸಿಐಡಿ ಅಧಿಕಾರಿಗಳು ತನಿಷ್ಕಾ

ಆಕೆಯನ್ನು ವಿಚಾರಣೆ ನಡೆಸಿದಾಗ ಹಲವು ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ತನಿಷ್ಕಾ ಪೊಲೀಸರ ಮುಂದೆ ಹೇಳಿಕೊಂಡ ಪ್ರಕಾರ, ಆಕೆ ಮನೆ ಬಿಟ್ಟು ಹೋಗಲು ಮುಖ್ಯವಾಗಿ ಮೂರು ಕಾರಣಗಳಿದ್ದವು. ಮೊದಲನೆಯದಾಗಿ, ಓದಿನಲ್ಲಿ ಸ್ವಲ್ಪ ಹಿಂದುಳಿದಿದ್ದ ಕಾರಣಕ್ಕೆ ಹೆತ್ತವರಿಂದ ಎದುರಾಗುತ್ತಿದ್ದ ಬೈಗುಳ ಮತ್ತು ಹಲ್ಲೆಯ ಕಿರುಕುಳ. ಎರಡನೆಯದಾಗಿ, ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮುದ್ದಿನ ನಾಯಿ ಮೃತಪಟ್ಟಿದ್ದರಿಂದ ಆಕೆ ತೀವ್ರ ಮನನೊಂದಿದ್ದಳು. ಮೂರನೆಯದಾಗಿ, ತನ್ನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದ ಅಜ್ಜಿಯ ಮರಣ ಆಕೆಯನ್ನು ತೀವ್ರ ಖಿನ್ನತೆಗೆ ದೂಡಿತ್ತು. ಈ ಸಾಲು ಸಾಲು ಆಘಾತಗಳಿಂದ ಬೇಸತ್ತು ಇಬ್ಬರೂ ಮನೆ ತೊರೆಯುವ ನಿರ್ಧಾರ ಕೈಗೊಂಡಿದ್ದರು.

ಮನೆ ಬಿಟ್ಟ ನಂತರ ಇಬ್ಬರೂ ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಅಲ್ಲಿ ಪರಿಚಯವಾದ ಯುವಕರಿಗೆ ತಮಗೆ ಹೆತ್ತವರಿಲ್ಲ, ಅನಾಥರು ಎಂದು ಸುಳ್ಳು ಹೇಳಿ ನಂಬಿಸಿದ್ದರು. ಆ ಪೈಕಿ ಒಬ್ಬ ಯುವಕನನ್ನು ತನಿಷ್ಕಾ ಮದುವೆಯಾಗಿದ್ದು, ಪ್ರಸ್ತುತ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಇತ್ತೀಚೆಗೆ ಹೊಸ ಸಿಮ್ ಕಾರ್ಡ್ ಖರೀದಿಸಲು ಹೋದಾಗ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಆಕೆ, ಎಂಟು ತಿಂಗಳಿಂದ ನಡೆದ ಸಂಪೂರ್ಣ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಇನ್ನು ಜೊತೆಯಲ್ಲಿದ್ದ ಮತ್ತೊಬ್ಬ ಯುವತಿ ತೇಜಸ್ವಿನಿ, ಅಲ್ಲಿಯೇ ಪರಿಚಯವಾದ ಇನ್ನೊಬ್ಬ ಯುವಕನ ಜೊತೆ ತೆರಳಿದ್ದಾಳೆ ಎಂದು ತಿಳಿದುಬಂದಿದ್ದು, ಆಕೆಯನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.