ಶನಿವಾರ, 24 ಅಕ್ಟೋಬರ್ 2026

Gass Booking : ಗ್ಯಾಸ್ ಬುಕಿಂಗ್ ಸಮಯದಲ್ಲಿ ಬದಲಾವಣೆ- ಇನ್ಮುಂದೆ ಇಡೀ ದಿನ ಬುಕ್ ಮಾಡುವಂತಿಲ್ಲ, ಇಲ್ಲಿದೆ ನೋಡಿ ಟೈಮಿಂಗ್ಸ್

Gass Booking : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಸಿಲಿಂಡರ್ ಸಪ್ಲೈ ಸರಿಯಾಗಿ ಇಲ್ಲದ ಕಾರಣ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಕೂಡ ಕಷ್ಟವಾಗುತ್ತಿದೆ. ಇದರ ನಡುವೆ ಗ್ಯಾಸ್ ಬುಕ್ ಮಾಡುವ ವಿಚಾರವಾಗಿ ಏಜೆನ್ಸಿಗಳು ಗ್ರಾಹಕರಿಗೆ ಶಾಕ್ ನೀಡಿದೆ.

 ಇದುವರೆಗೂ ದಿನದ ಯಾವುದೇ ಸಮಯದಲ್ಲಿಯೂ ಫೋನ್ ಎತ್ತಿಕೊಂಡು ಗ್ಯಾಸ್ ಬುಕ್ ಮಾಡಬಹುದಾಗಿತ್ತು. ಆದರೆ ಇನ್ನುಮುಂದೆ ನೀವು ದಿನದ ಯಾವುದೇ ಸಮಯದಲ್ಲಿ ಫೋನ್ ಎತ್ತಿಕೊಂಡು ಗ್ಯಾಸ್ ಬುಕ್ ಮಾಡುತ್ತಿದ್ದರೆ, ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಗ್ಯಾಸ್ ಏಜೆನ್ಸಿಗಳು ಬುಕಿಂಗ್‌ಗಾಗಿ ನಿರ್ದಿಷ್ಟ ವೇಳಾಪಟ್ಟಿಯನ್ನು ಜಾರಿಗೆ ತಂದಿವೆ, ಇಲ್ಲದಿದ್ದರೆ ನಿಮ್ಮ ಬುಕಿಂಗ್’ನ್ನು ಸ್ವೀಕರಿಸಲಾಗುವುದಿಲ್ಲ. ಹೊಸ ನಿಯಮಗಳ ಪ್ರಕಾರ, ಬುಕಿಂಗ್ ವಿಂಡೋ ಇನ್ನು ಮುಂದೆ ದಿನದ 24 ಗಂಟೆಗಳೂ ತೆರೆದಿರುವುದಿಲ್ಲ.

ಯಸ್, ನೀವು ಸಿಲಿಂಡರ್ ಬುಕ್ ಮಾಡಲು ಬಯಸಿದರೆ, ನೀವು ಬೆಳಿಗ್ಗೆ 5 ರಿಂದ ಬೆಳಿಗ್ಗೆ 7 ಗಂಟೆ ಅಥವಾ ರಾತ್ರಿ 8 ರಿಂದ ಬೆಳಿಗ್ಗೆ 12 ಗಂಟೆಯ ನಡುವೆ ಕರೆ ಮಾಡಬೇಕು ಅಥವಾ ಸಂದೇಶ ಕಳುಹಿಸಬೇಕು. ಮುಖ್ಯವಾಗಿ, ಬುಕಿಂಗ್’ನ್ನು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ (ಸರಿಸುಮಾರು 13 ಗಂಟೆಗಳು) ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಆದ್ದರಿಂದ ಗ್ಯಾಸ್ ಬುಕ್ ಮಾಡುವವರು ಅಲಾರಾಂ ಇಟ್ಟುಕೊಂಡು ಸರಿಯಾದ ಸಮಯಕ್ಕೆ ಮಾಡಿದರೆ ಒಳಿತು.

ಇಷ್ಟೇ ಅಲ್ಲದೆ ನೀವು ಇಚ್ಛೆಯಂತೆ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಕೊನೆಯ ಸಿಲಿಂಡರ್ ವಿತರಣೆಯಿಂದ ಕನಿಷ್ಠ 25 ದಿನಗಳು ಕಳೆದಿದ್ದರೆ ಮಾತ್ರ ಈಗ ಬುಕಿಂಗ್‌ಗಳನ್ನು ಸ್ವೀಕರಿಸಲಾಗುತ್ತದೆ. ಈ ಸಮಯಕ್ಕಿಂತ ಮೊದಲು ನೀವು ಬುಕ್ ಮಾಡಲು ಪ್ರಯತ್ನಿಸಿದರೆ, ಅದು ಬುಕ್ ಆಗುವುದಿಲ್ಲ.