ಶನಿವಾರ, 24 ಅಕ್ಟೋಬರ್ 2026

Iran: ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಜಾರಿ ಮಾಡಿದ ಇರಾನ್‌ – ಒಂದು ಹಡಗು ದಾಟಲು ಬೇಕು 18 ಕೋಟಿ ರೂ!!

Iran: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್‌ ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ವ್ಯವಸ್ಥೆ ಜಾರಿಗೆ ತಂದಿದೆಯಂತೆ. ಈ ಮಾರ್ಗದಲ್ಲಿ ಹಾದು ಹೋಗುವ ಟ್ಯಾಂಕರ್ ಗಳಿಗೆ ಭಾರೀಮುತ್ತದ ಟ್ಯಾಕ್ಸ್ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ.

ಯಸ್, ಹಾರ್ಮುಜ್‌ ಜಲಸಂಧಿಯಲ್ಲಿ ಹಾದು ಹೋಗುವಂತಹ ಖಾಸಗಿ ತೈಲ ಟ್ಯಾಂಕರ್‌ಗಳು ಈ ಮಾರ್ಗದ ಮೂಲಕ ಸುರಕ್ಷಿತವಾಗಿ ಸಾಗಬೇಕೆಂದರೆ, ಕಂಪನಿಗಳು 2 ಮಿಲಿಯನ್‌ ಯುಎಸ್‌ ಡಾಲರ್‌ ಎಂದರೆ 18 ಕೋಟಿ ರೂಪಾಯಿ ಟೋಲ್‌ ಪಾವತಿಸಬೇಕು ಎಂದು ವರದಿಯಾಗಿದೆ.

ಲಾಯ್ಡ್ಸ್ ಲಿಸ್ಟ್‌ನ ವರದಿಯ ಪ್ರಕಾರ, ಇರಾನ್ ತನ್ನ ನೀರಿನಲ್ಲಿ “ಸುರಕ್ಷಿತ ಮಾರ್ಗ” ವನ್ನು ಸ್ಥಾಪಿಸಿದ್ದು, ಅನುಮೋದಿತ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡುತ್ತದೆ ಮತ್ತು ಪ್ರತಿಯಾಗಿ ಅವುಗಳಿಗೆ ತೆರಿಗೆ ವಿಧಿಸಲಾಗುತ್ತಿದೆ. ಭಾರತ, ಪಾಕಿಸ್ತಾನ, ಇರಾಕ್, ಮಲೇಷ್ಯಾ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ತಮ್ಮ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಇರಾನ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಿವೆ ಎಂದು ವರದಿ ಹೇಳುತ್ತದೆ.