ಭಾನುವಾರ, 25 ಅಕ್ಟೋಬರ್ 2026
Trending

ಸ್ವಯಂ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; ಉಜಿರೆ ರುಡ್‌ಸೆಟ್‌ನಿಂದ ಉಚಿತ ಕೋಳಿ ಸಾಕಾಣಿಕೆ ತರಬೇತಿ!

​ಉಜಿರೆ: ಸ್ವಯಂ ಉದ್ಯೋಗದ ನಿರೀಕ್ಷೆಯಲ್ಲಿರುವ ಗ್ರಾಮೀಣ ಭಾಗದ ಯುವಕ-ಯುವತಿಯರು ಹಾಗೂ ಮಹಿಳೆಯರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ಸಹಕಾರಿಯಾಗುವಂತೆ, ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಸಿದ್ಧವನದ ರುಡ್‌ಸೆಟ್ ಸಂಸ್ಥೆಯು (RUDSET Institute) 12 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ ಶಿಬಿರವನ್ನು ಆಯೋಜಿಸಿದೆ.

Sponsored

ಮಂಗಳೂರು: ಚಾಕುವಿನಿಂದ ಇರಿದು ಸ್ವಂತ ತಮ್ಮನಿಂದ ಅಣ್ಣನ ಕೊಲೆ

​ತರಬೇತಿಯು ಸೆಪ್ಟೆಂಬರ್ 7 ರಿಂದ 18 ರವರೆಗೆ ಸಂಸ್ಥೆಯ ಸಿದ್ಧವನದ ಆವರಣದಲ್ಲಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ತರಬೇತಿ ತರಗತಿಗಳು ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
​ಕೋಳಿ ಸಾಕಾಣಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಬೆಳೆಸಲು ಬೇಕಾಗುವ ವೈಜ್ಞಾನಿಕ ವಿಧಾನಗಳು, ತಳಿಗಳ ಆಯ್ಕೆ, ಆಧುನಿಕ ಶೆಡ್ ನಿರ್ಮಾಣ, ಸುಧಾರಿತ ಆಹಾರ ನಿರ್ವಹಣೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ಮಾಂಸ ಹಾಗೂ ಮೊಟ್ಟೆ ಉತ್ಪಾದನೆ, ಸೂಕ್ತ ಮಾರುಕಟ್ಟೆ ಕಂಡುಕೊಳ್ಳುವ ವಿಧಾನ ಮತ್ತು ಬ್ಯಾಂಕಿಂಗ್ ಹಾಗೂ ಲೆಕ್ಕಪತ್ರ ನಿರ್ವಹಣೆಯ ಕುರಿತು ತಜ್ಞರಿಂದ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಮಂಗಳೂರು: ಚಾಕುವಿನಿಂದ ಇರಿದು ಸ್ವಂತ ತಮ್ಮನಿಂದ ಅಣ್ಣನ ಕೊಲೆ

​18 ರಿಂದ 50 ವರ್ಷ ವಯೋಮಿತಿಯ ಗ್ರಾಮೀಣ ಯುವಕ-ಯುವತಿಯರು ಈ ಉಚಿತ ತರಬೇತಿಯ ಪ್ರಯೋಜನ ಪಡೆಯಬಹುದು. ಆಸಕ್ತರು ತರಬೇತಿ ಪ್ರಾರಂಭವಾಗುವ ಮುನ್ನವೇ ಸಂಸ್ಥೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
​ಸಂಪರ್ಕಿಸಿ: 6364561982