ಶನಿವಾರ, 24 ಅಕ್ಟೋಬರ್ 2026

Bird flu in China : ದೇಶಕ್ಕೆ ಮತ್ತೊಂದು ಸೋಂಕಿನ ಆತಂಕ ಹೆಚ್ಚಳ..! ಚೀನಾದಲ್ಲಿ ಹಕ್ಕಿ ಜ್ವರದಿಂದ ಮೊದಲ ವ್ಯಕ್ತಿ ಸಾವು

ಮಹಿಳೆಯೊಬ್ಬರು H3N8 ಹಕ್ಕಿ ಜ್ವರದಿಂದ ಸೋಂಕಿಗೆ ಒಳಗಾಗಿದ್ದರು ಮತ್ತು ಸೋಮವಾರ ಸಾವನ್ನಪ್ಪಿರುವುದು ಚೀನಾದ ಮಾಧ್ಯಮ ವರದಿಗಳ ಪ್ರಕಾರ ತಿಳಿಯಲಾಗಿದೆ

Bird flu in China

Bird flu in China : ಬೀಜಿಂಗ್ : ಚೀನಾದಲ್ಲಿ H3N8 ಹೆಸರಿನ ಹಕ್ಕಿ (Bird flu in China) ಜ್ವರ ವೈರಸ್‌ನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ವರದಿಯಾಗಿದೆ

ದಕ್ಷಿಣ ಚೀನಾದ ಝಾಂಗ್‌ಶಾನ್ ನಗರದಲ್ಲಿ 56 ವರ್ಷದ ಮಹಿಳೆಯೊಬ್ಬರು H3N8 ಹಕ್ಕಿ ಜ್ವರದಿಂದ ಸೋಂಕಿಗೆ ಒಳಗಾಗಿದ್ದರು ಮತ್ತು ಸೋಮವಾರ ಸಾವನ್ನಪ್ಪಿರುವುದು ಚೀನಾದ ಮಾಧ್ಯಮ ವರದಿಗಳ ಪ್ರಕಾರ ತಿಳಿಯಲಾಗಿದೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇದು H3N8 ಏವಿಯನ್ ಇನ್ಫ್ಲುಯೆನ್ಸದಿಂದ ಮೊದಲ ಮಾನವ ಸಾವು ಇದಾಗಿದ್ದು. ಕಳೆದ ವರ್ಷ, ಮಾನವರಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ವರದಿಯಾಗಿವೆ.

ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅವರು ಮೈಲೋಮಾ (ಕ್ಯಾನ್ಸರ್) ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎನ್ನಲಾಗಿದೆ.

WHO ಅಪ್‌ಡೇಟ್‌ನಲ್ಲಿ, ‘ತೀವ್ರ ತೀವ್ರ ಉಸಿರಾಟದ ಸೋಂಕು (SARI) ಕಣ್ಗಾವಲು ವ್ಯವಸ್ಥೆಯ ಮೂಲಕ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ನಂತರ ರೋಗಿಯ ನಿಕಟ ಸಂಪರ್ಕದಲ್ಲಿ ಯಾರೂ ಸೋಂಕಿನ ಅಥವಾ ರೋಗದ ಲಕ್ಷಣಗಳನ್ನು ಅಭಿವೃದ್ಧಿಪಡಿಸಲಿಲ್ಲ ಅಂತ ತಿಳಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ