ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ದೀಕ್ಷಾರಂಭ – 2026
“ಒಂದು ಕಾಲದಲ್ಲಿ ನಗರಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಲಭ್ಯವೆಂದು ನಂಬಲಾಗಿತ್ತು. ಇದರ ಪರಿಣಾಮವಾಗಿ ನಮ್ಮ ಪ್ರದೇಶದ ಅನೇಕ ಜನರು ಮಂಗಳೂರು ಬೆಂಗಳೂರಿನಂತಹ ನಗರಗಳನ್ನೇ ವಿದ್ಯಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಮಂಗಳೂರು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿರುವವರು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ನಮ್ಮ ಶಾಲಾ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಗಳಿಸಿರುವ ನಂಬಿಕೆ ಹಾಗೂ ಖ್ಯಾತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ದೀಕ್ಷಾರಾಂಭ 2026 ರ ಉದ್ಘಾಟನೆಯ ಸಂದರ್ಭದಲ್ಲಿ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀ ಸುಮಂತ್ ಕುಮಾರ್ ಜೈನ್ ರವರು ಹೇಳಿದರು.
ಸಂಯೋಜಕರಾದ ಲೀನಾ ಫ್ಲೋರಿನ್ ಪಿಂಟೋ ಅವರು ಮಾತನಾಡಿ “ಶಿಸ್ತು ಘನತೆಯ ಅಡಿಪಾಯ ಅದು ಮನೆಯಲ್ಲಿ ಆರಂಭವಾಗಿ ಶಾಲೆಯಲ್ಲಿ ಮುಂದುವರಿಯಬೇಕು. ಶಿಸ್ತನ್ನು ಶಿಕ್ಷೆಯೆಂದು ಪರಿಗಣಿಸುವ ಬದಲು ಅದು ಜೀವನ ವಿಧಾನವಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಲು ನಾವು ಕೆಲವು ಸರಳ ಹಾಗೂ ವಿದ್ಯಾರ್ಥಿಸ್ನೇಹಿ ನಿಯಮಗಳನ್ನು ಪರಿಚಯಿಸುತ್ತಿದ್ದೇವೆ. ಈ ನಿಯಮಾಭ್ಯಾಸಗಳು ಮುಂದೆ ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ನೆರವಾಗುತ್ತವೆ” ಎಂದರು.
“ಉತ್ತಮ ಧೈಯದೊಂದಿಗೆ ಬೆಳೆಯುತ್ತಿರುವ ನಮ್ಮ ಸಂಸ್ಥೆ ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳಲು ನೆರವಾಗುವ ಎಲ್ಲಾ ಕೌಶಲಗಳನ್ನು ನೀಡುತ್ತದೆ” ಎಂದು ಎಕ್ಸೆಲ್ ಟೆಕ್ನ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಿತ್ರಾ ತಿಳಿಸಿದರು.
ಶಿಕ್ಷಕಿ ಶ್ರೀಮತಿ ಜೊಟಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಮೋನಿಸ್ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಗೀತಾ ಉಜ್ವಲ್ ಶಾಲಾ ವಾಹನ ಸುರಕ್ಷತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಶಿಕ್ಷಕಿಯರಾದ ಚೇತನಾ, ಪೂರ್ಣಿಮಾ, ಲವೀನಾ ಸಹಕರಿಸಿದರು.



