ಶನಿವಾರ, 24 ಅಕ್ಟೋಬರ್ 2026

ಜು. 8 ರಿಂದ ಗಡಾಯಿಕಲ್ಲು ಪ್ರವೇಶ ಕ್ಲೋಸ್ !

ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರ ನೆಚ್ಚಿನ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಜುಲೈ 8 ರಿಂದ ಪ್ರವಾಸಿಗರಿಗೆ ನಿರ್ಬಂಧವನ್ನು ನೀಡಲಾಗಿದೆ.

ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವನ್ಯಜೀವಿ  ಅರಣ್ಯ ಇಲಾಖೆಯ ವಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ಜಾರುವ ಕಲ್ಲುಗಳು ಮತ್ತು ಜನದಟ್ಟಣೆಯಿಂದ ಅಪಾಯದ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜುಲೈ 8 ರ ನಂತರದ ಎಲ್ಲಾ online ಬುಕಿಂಗ್ ಗಳು ರದ್ದುಹವಾಮಾನ ಮತ್ತು ಪರಿಸ್ಥಿತಿ ಸುಧಾರಿಸಿದ ನಂತರವಷ್ಟೇ ಮತ್ತೆ ತೆರೆಯಲಾಗುವುದು.ದಯವಿಟ್ಟು ಪ್ರವಾಸಿಗರು ಸಹಕರಿಸಿ. ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.