ಶನಿವಾರ, 7 ನವೆಂಬರ್ 2026

ಕೇಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮರು ಚುನಾವಣೆ – ಚುನಾವಣಾ ಆಯೋಗ ನಿರ್ಧಾರ!!

Advertisement
Advertisement

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ಜನತಾ ಪಾರ್ಟಿ (BJP) ಕಮಾಲ್​ ಮಾಡಿದೆ. ಸತತ 15 ವರ್ಷಗಳ ಮಮತಾ ಬ್ಯಾನರ್ಜಿ (Mamatha Banerjee) ಆಡಳಿತ ಯುಗ ಅಂತ್ಯ ಕಂಡಿದೆ. ಆದರೆ ಕೆಲವು ತಿಂಗಳುಗಳಲ್ಲಿ ಕೆಲವು ಸ್ಥಾನಗಳಲ್ಲಿ ಮರುಮತದಾನ ಮತ್ತು ಉಪಚುನಾವಣೆಗಳು ನಡೆಯುವ ಸಾಧ್ಯತೆ ಇದೆ.

Sponsored

ಹೌದು, ಪಶ್ಚಿಮ ಬಂಗಾಳದಲ್ಲಿ ಎರಡು ಕ್ಷೇತ್ರಗಳಿಗೆ ಮರು ಚುನಾವಣೆ ನಡೆಯಲಿದೆ. ಕಾರಣ ಸುವೇಂದು ಅಧಿಕಾರಿ ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡಲ್ಲೂ ಗೆಲುವು ಸಾಧಿಸಿರುವುದು. ಇದೇ ರೀತಿಯಾಗಿ, ಹುಮಾಯೂನ್ ಕಬೀರ್ ಕೂಡ ಎರಡು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇವರ ಬೆಂಬಲಿಗರಿಗೆ ಇದು ಹೆಮ್ಮೆಯ ವಿಷಯವಾದರೂ, ಭಾರತದ ಚುನಾವಣಾ ಕಾನೂನುಗಳು ಈಗ ಇವರ ಮುಂದೆ ಹೊಸ ಸವಾಲನ್ನು ಇಟ್ಟಿವೆ.

Advertisement
Advertisement

ಭಾರತದ ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ವಿಧಾನಸಭಾ ಸ್ಥಾನಗಳನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಅಂದರೆ, ಸುವೇಂದು ಅಧಿಕಾರಿ ಮತ್ತು ಹುಮಾಯೂನ್ ಕಬೀರ್ ಇಬ್ಬರೂ ತಮ್ಮ ಗೆದ್ದಿರುವ ಎರಡು ಸ್ಥಾನಗಳಲ್ಲಿಂದ ಒಂದನ್ನು ಮಾತ್ರ ಕಾಯ್ದುಕೊಳ್ಳಬೇಕು. ಉಳಿದ ಇನ್ನೊಂದು ಸ್ಥಾನಕ್ಕೆ ಅವರು ರಾಜೀನಾಮೆ ನೀಡಲೇಬೇಕು. ಈ ರಾಜೀನಾಮೆ ಪ್ರಕ್ರಿಯೆಯನ್ನು ಅವರು ಫಲಿತಾಂಶ ಘೋಷಣೆಯಾದ ನಂತರ 6 ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದೆ. ಅವರು ಒಂದು ಸ್ಥಾನಕ್ಕೆ ರಾಜೀನಾಮೆ ನೀಡುವ ಕೂಡಲೇ, ಆ ಸ್ಥಾನ ಖಾಲಿ ಸ್ಥಾನವೆಂದು ಪರಿಗಣಿಸಲಾಗುತ್ತದೆ. ನಂತರ ಚುನಾವಣಾ ಆಯೋಗವು ಆ ಸ್ಥಾನಕ್ಕೆ ಉಪಚುನಾವಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.

Advertisement

ಇನ್ನೂ ಫಾಲ್ಟಾ ಎಂಬ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಪ್ರಾರಂಭವಾಗುವ ಮೊದಲೇ ಮರುಚುನಾವಣೆಗೆ ಆದೇಶ ಹೊರಡಿಸಲಾಗಿತ್ತು. ಹಿಂದಿನ ಮತದಾನದ ವೇಳೆ ಗಂಭೀರ ಅಕ್ರಮಗಳು, ರಿಗ್ಗಿಂಗ್ ಅಥವಾ ತಾಂತ್ರಿಕ ದೋಷಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಸಂಪೂರ್ಣ ಪ್ರಕ್ರಿಯೆಯನ್ನು ಮತ್ತೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬರುತ್ತಿದೆ. ಆಯೋಗವು ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೂ, ಪಾರದರ್ಶಕತೆ ಮತ್ತು ನಂಬಿಕೆಯನ್ನು ಕಾಪಾಡುವ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತನಾಡಲಾಗುತ್ತಿದೆ.

Advertisement
Advertisement