ಕೊಡಗು: ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ವಿವಾಹ ಸಮಾರಂಭ ಇಂದು ಕೊಡಗಿನಲ್ಲಿ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಕೊಡಗು ಪ್ರವಾಸ ಕೈಗೊಂಡಿದ್ದಾರೆ.
Sponsoredಕೋಲ್ಪೆಯಲ್ಲಿ ಕಾರ್ ತಡೆದು ಯುವತಿ ಕುಟುಂಬದ ಮೇಲೆ ಹಲ್ಲೆ? 9 ಮಂದಿಗೆ FIR
ಡಿ.ಕೆ. ಶಿವಕುಮಾರ್ ಅವರು ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಹಾಗೂ ದರ್ಶನ ಪಡೆಯಲಿದ್ದಾರೆ. ಬಳಿಕ ಕಾವೇರಿ ಕಾಲೇಜು ಮೈದಾನಕ್ಕೆ ಆಗಮಿಸಿ, ಅಲ್ಲಿಂದ ನಲಪಾಡ್ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದ ಕೂರ್ಗ್ ವೈಲ್ಡರ್ನೆಟ್ ರೆಸಾರ್ಟ್ನಲ್ಲಿ ಮಧ್ಯಾಹ್ನ 12 ಗಂಟೆಗೆ ನಿಕಾಹ್ ನಡೆಯಲಿದೆ. ಎರಡೂ ಕುಟುಂಬಗಳ ಆಪ್ತರು ಹಾಗೂ ಆಹ್ವಾನಿತ ಗಣ್ಯರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಕೋಲ್ಪೆಯಲ್ಲಿ ಕಾರ್ ತಡೆದು ಯುವತಿ ಕುಟುಂಬದ ಮೇಲೆ ಹಲ್ಲೆ? 9 ಮಂದಿಗೆ FIR
ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರರಾಗಿರುವ ಮೊಹಮ್ಮದ್ ನಲಪಾಡ್, ಈ ಹಿಂದೆ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದರು. ಇದೀಗ ಮಲಿಹಾ ಫಾತಿಮಾ ಅವರೊಂದಿಗೆ ಎರಡನೇ ವಿವಾಹವಾಗುತ್ತಿದ್ದಾರೆ.
ಮಲಿಹಾ ಫಾತಿಮಾ ಅವರು ಕಾನೂನು ಪದವಿ ಪಡೆದಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ನಿಶ್ಚಯವಾಗಿದೆ.
ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ನಟರಾದ ಸುದೀಪ್ ಮತ್ತು ಯಶ್ ಸೇರಿದಂತೆ ಕೆಲವು ಪ್ರಮುಖರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಆಗಸ್ಟ್ 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಕುಟುಂಬಸ್ಥರು ಮತ್ತು ಆಯ್ದ ಆಹ್ವಾನಿತ ಗಣ್ಯರು ಮಾತ್ರ ಭಾಗವಹಿಸಲಿದ್ದಾರೆ.
ಕೋಲ್ಪೆಯಲ್ಲಿ ಕಾರ್ ತಡೆದು ಯುವತಿ ಕುಟುಂಬದ ಮೇಲೆ ಹಲ್ಲೆ? 9 ಮಂದಿಗೆ FIR




