ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಧರ್ಮಸ್ಥಳ ತಲೆಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು ತನಿಖಾ ತಂಡದ ಅವಧಿ ಹಾಗೂ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದಾರೆ.
Sponsoredಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರುಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಅದರಲ್ಲಿ
ಎಸ್‌ಐಟಿ ಮುಖ್ಯಸ್ಥರಾದ ಪ್ರಣವ್ ಮೊಹಂತಿ ಅವ್ರು ಆಯೋಗಕ್ಕೆ ವರದಿ ಸಲ್ಲಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಯು.ಡಿ.ಆರ್ (UDR) ಪ್ರಕರಣಗಳು, ಪತ್ತೆಯಾಗಿರುವ 07 ಮಾನವ ತಲೆಬುರುಡೆ,ಅಸ್ತಿಪಂಜರಗಳ ಕುರಿತು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಶಗಳು ಬೆಳಕಿಗೆ ಬಂದಿದೆ. ಇದರಲ್ಲಿ ಯು.ಡಿ.ಆರ್ ಪ್ರಕರಣಗಳ ವ್ಯತ್ಯಾಸವಿದ್ದೆ ಅಂತ ವಿವರಿಸಿದ್ದಾರೆ.
ಹೀಗಾಗಿ ಧರ್ಮಸ್ಥಳದಲ್ಲಿ ಈ ಹಿಂದೆ ವರದಿಯಾಗಿದ್ದ 30 ಅಸಹಜ ಸಾವು (UDR) ಪ್ರಕರಣಗಳ ವ್ಯತ್ಯಾಸ ಹಾಗೂ ಬೆಳ್ತಂಗಡಿ ಠಾಣೆಯ ಹಳೆಯ ಯುಡಿಆರ್ ಪ್ರಕರಣಗಳ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ ನಿಖರ ತನಿಖೆ ನಡೆಸಲು ಅವಕಾಶ ಕೊಡಬೇಕು ಎಂದು ಆಯೋಗ ಕೋರಿದೆ.




