ಸೋಮವಾರ, 26 ಅಕ್ಟೋಬರ್ 2026
Trending

ಪೇಜಾವರ ಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದ ಅಮಿತ್ ಶಾ

Advertisement

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ಮಾಡಿ, ಆಶೀರ್ವಾದ ಪಡೆಡಿದ್ದಾರೆ.

Sponsored

ವಸಂತ್ ಕುಂಜ್‌ನಲ್ಲಿರುವ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ 39ನೇ ಚಾತುರ್ಮಾಸ್ಯ ವ್ರತ ನಿರತರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ಮಾಡಿ, ಆಶೀರ್ವಾದ ಪಡೆಡಿದ್ದಾರೆ.

Advertisement
Advertisement

ಸಂಜೆ 4.30ರ ಸುಮಾರಿಗೆ ವೇದವ್ಯಾಸ ಗುರುಕುಲಕ್ಕೆ ಅಮಿತ್ ಶಾ ಆಗಮಿಸಿದ್ದು, ಅವರನ್ನು ಗುರುಕುಲದ ವಿದ್ಯಾರ್ಥಿಗಳು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಡಾ.ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಅವರು ಅವರನ್ನು ಬರಮಾಡಿಕೊಂಡರು.

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾದ ಅಮಿತ್ ಶಾ ಅವರು ಫಲಪುಷ್ಪ ಸಮರ್ಪಿಸಿ, ಸ್ವಾಮೀಜಿಯವರೊಂದಿಗೆ ಕೆಲಹೊತ್ತು ಆಪ್ತ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರು ಅಮಿತ್ ಶಾ ಅವರಿಗೆ ಶಾಲು, ಪೇಟ ಹಾಗೂ ಹಾರ ಹಾಕಿ ಸನ್ಮಾನಿಸಿ, ಸ್ಮರಣಿಕೆ ಸಹಿತ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Advertisement
div class="ere-sticky">