ಮಂಗಳೂರಲ್ಲಿ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ. ತಬೆನ್ನಲ್ಲೇ ಉರ್ದುಗೂಅಧಿಕೃತ ಭಾಷಾ ಸ್ಥಾನಮಾನಕ್ಕೆ ಆಗ್ರಹ ಶುರುವಾಗಿದೆ. ಎಸ್ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಈ ಸಂಬಂಧ ಸಿಎಂಗೆ ಪತ್ರ ಬರೆದಿದ್ದಾರೆ.
Sponsoredಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ರಾಜ್ಯದಲ್ಲಿ 4,236 ಉರ್ದು ಮಾಧ್ಯಮ ಶಾಲೆಗಳಿವೆ. ರಾಜ್ಯದಲ್ಲಿ ಉರ್ದು ಭಾಷೆಯನ್ನು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ತೆಲಂಗಾಣ ಮಾದರಿಯಲ್ಲಿ ಉರ್ದುವಿಗೆ ಸ್ಥಾನಮಾನ ನೀಡಬೇಕು. ಉರ್ದುವಿಗೆ ಸ್ಥಾನಮಾನ ನೀಡುವುದರಿಂದ ಕನ್ನಡಕ್ಕೆ ಧಕ್ಕೆಯಿಲ್ಲ. ಹಾಗಾಗಿ ಉರ್ದು ಭಾಷೆಗೂ ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಲು ಬೇಡಿಕೆ ಇಟ್ಟಿದ್ದು, ಉರ್ದು ಶಾಲೆಗಳ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹಿದ್ದಾರೆ. ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಉರ್ದುವಿನಲ್ಲೂ ನೀಡಲು ಒತ್ತಾಯಿದ್ದಾರೆ.




