Couple Romance Video : ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತದೆ. ಕೆಲವೊಂದು ವಿಚಾರಗಳು ಸಖತ್ ಸದ್ದು ಮಾಡಿ, ಎಲ್ಲೆಡೆ ವೈರಲ್ ಆಗುತ್ತವೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ ಖುಲ್ಲಂ ಖುಲ್ಲಂ ಪ್ರಣಯದಾಟದಲ್ಲಿ ಮುಳುಗಿದ ಜೋಡಿಯ ವಿಡಿಯೋ (Couple Romance Video) ವೈರಲ್ ಆಗಿದೆ.
Sponsoredಈ ದಂಪತಿಗಳನ್ನು ಬಿಹಾರದವರು (Bihar) ಎನ್ನಲಾಗಿದ್ದು, ಚಲಿಸುತ್ತಿರುವ ರೈಲಿನಲ್ಲಿ ಪ್ರೀತಿಯ ನಶೆಯಲ್ಲಿ ಮೈಮರೆತಿದ್ದಾರೆ. ಹೌದು, ರೈಲಿನಲ್ಲಿರುವ ಸಹಪ್ರಯಾಣಿಕರನ್ನು ಮರೆತು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಸದ್ಯ ಈ ಪ್ರಣಯ ಜೋಡಿಯ ಸರಸವನ್ಪು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕನು ವಿಡಿಯೋ ಮೂಲಕ ಸೆರೆಹಿಡಿದಿದ್ದಾನೆ.
ವಿಡಿಯೋದಲ್ಲಿ, ರೈಲು (train) ಚಲಿಸುತ್ತಿದ್ದು, ರೈಲಿನಲ್ಲಿ ಜನರು ತುಂಬಿದ್ದಾರೆ. ದಂಪತಿಯ ಅಕ್ಕಪಕ್ಕದಲ್ಲಿ ಸಹಪ್ರಯಾಣಿಕರಿದ್ದಾರೆ. ಈ ಮಧ್ಯೆ, ದಂಪತಿಗಳು ಪ್ರೀತಿಯಲ್ಲಿ ಮುಳುಗಿದ್ದಾರೆ. ಪತಿ ಹೆಂಡತಿಯ ಹೆಗಲ ಮೇಲೆ ತಲೆಯಿಟ್ಟು ಪ್ರೀತಿಯಿಂದ ಹೆಂಡತಿಯ ಬಳಿ ಮಾತನಾಡುತ್ತಿದ್ದಾನೆ. ಇಬ್ಬರೂ ಮಾತನಾಡುತ್ತಾ, ತಮ್ಮದೇ ಪ್ರೇಮಲೋಕದಿ ಮುಳುಗಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಕಷ್ಟು ವೀಕ್ಷಣೆ ಗಳಿಸಿದೆ. ಅಲ್ಲದೆ, ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ಕಾಮೆಂಟ್ ಕೂಡ ಮಾಡಿದ್ದಾರೆ.





Comments are closed.