ಇತ್ತೀಚೆಗೆ ರೈಲ್ವೇ ಪ್ರಯಾಣಿಕರು ರಾತ್ರಿ ವೇಳೆ ಹಾಸಲು, ಹೊದಿಯಲು ಕೊಡುವ ಬೆಡ್ಶೀಟ್ ಕದ್ದು ರಾಜಾರೋಷವಾಗಿ ಹೊರಗಡೆ ಬಳಕೆ ಮಾಡುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ.
ಹೌದು, ದಂಪತಿಯೊಂದುಬೆಡ್ಶೀಟ್ ಕಳುವು ಮಾಡಿ ಕೊಂಡೊಯ್ಯುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತೀವ್ರ ವಿಚಿತ್ರವಾಗಿದೆ. ಇದರ ಕುರಿತಾಗಿ ವಿಡಿಯೋ ವೈರಲ್ ಆಗಿದೆ.
ಪರ್ಪಲ್ ಸೂಟ್ಕೇಸ್ನಲ್ಲಿ ವ್ಯಕ್ತಿಯೊಬ್ಬ ಕದ್ದಿರುವ ಬೆಡ್ಶೀಟ್ ಹೊರಗೆ ತೆಗೆದಿರುವುದು ವಿಡಿಯೋದಲ್ಲಿದೆ. ನೀವು ಬೆಡ್ಶೀಟ್ ತೆಗೆದುಕೊಳ್ಳಬಾರದಿತ್ತು ಎಂದು ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಹೇಳಿದ. ಆಗ ಮಗು ಹಿಡಿದುಕೊಂಡಿದ್ದ ಮಹಿಳೆ ‘ನಾವು ಹೀಗೆಕೆ ಮಾಡಿದ್ದೇವೆ ಎನ್ನುವುದು ನಿಮಗೆ ಗೊತ್ತೆ ರೈಲ್ವೆ ಟಿಕೆಟ್ ಪರೀಕ್ಷಕನು ಹೆಚ್ಚುವರಿ ಹಣ ಪಡೆದುಕೊಂಡ ಹೀಗಾಗಿ ನಾವು ಬೆಡ್ ಶೀಟ್ ತೆಗೆದುಕೊಂಡೆವು. ನಾವು ಕದ್ದಿಲ್ಲ. ತಗೊಂಡಿದ್ದು’ ಎಂದು ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಹಾಗೂ ಆಕೆಗೆ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ಮಹಿಳೆಯ ಪತಿ ಸಾಕು ಸುಮ್ಮನಿರು ಎಂದು ಸಮಾಧಾನ ಪಡಿಸಿರುವುದು ವಿಡಿಯೋದಲ್ಲಿ ಇದೆ.
ಸೂಟ್ಕೇಸ್ನಿಂದ ಬೆಡ್ಶೀಟ್ಗಳನ್ನು ತೆಗೆದು ಹಿಂತಿರುಗಿಸಿದ ಅವರು, ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಗೆ ಕ್ಯಾಮೆರಾ ಆಫ್ ಮಾಡುವಂತೆಯೂ ಕೇಳಿಕೊಂಡಿದ್ದಾನೆ. ಘಟನೆ ಬಗ್ಗೆ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಮಾತನಾಡಿದ್ದು, ಅವರು ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ಬಗ್ಗೆ ಪಶ್ಚಾತಾಪವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.



