ಶನಿವಾರ, 24 ಅಕ್ಟೋಬರ್ 2026

ಗ್ರಾಹಕರಿಗೆ ಚಿಕನ್‌ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ

Egg price

ಚಿಕನ್‌ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಾಗಿದೆ. ಬೆಂಗಳೂರಿನಲ್ಲಿ ಬಾಯ್ಲರ್‌ ಚಿಕನ್‌ ಬೆಲೆ ರೂ.360 ಹಾಗೂ ಒಂದು ಮೊಟ್ಟೆಯ ಚಿಲ್ಲರೆ ದರ ರೂ.9 ಏರಿಕೆ ಕಂಡಿದೆ. ಚರ್ಮವಿಲ್ಲದ ಬಾಯ್ಲರ್‌ ಚಿಕರ್‌ ಪ್ರತಿ ಕೆಜಿಗೆ ರೂ.360 ಹಾಗೂ ವಿತ್‌ ಸ್ಕಿನ್‌ ಚಿಕನ್‌ ಪ್ರತಿ ಕೆಜಿಗೆ ರೂ.340 ಮಾರಾಟವಾಗುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ರೂ.300 ಆಸುಪಾಸಿನಲ್ಲಿದ್ದ ಚಿಕನ್‌ ಬೆಲೆ ಇದೀಗ 350 ರಿಂದ 360 ರೂ. ವರೆಗೆ ಏರಿಕೆ ಕಂಡಿದೆ.